fbpx
ಸಮಾಚಾರ

ಕನ್ನಡಿಗ ಪಡಿಕ್ಕಲ್ ಮಿಂಚಿನ ಆಟಕ್ಕೆ ಶಹಬ್ಬಾಸ್ ಎಂದ ಬಿಸಿಸಿಐ ಬಾಸ್ ಸೌರವ್ ಗಂಗೂಲಿ: ಹೇಳಿದ್ದೇನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಅಮೋಘ ಪ್ರದರ್ಶನ ತೋರುವುದರ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ 10 ರನ್‌ಗಳ ಗೆಲುವು ದಾಖಲಿಸಿದೆ.

ಇನ್ನು ತಾನು ಆಡಿದ ಮೊದಲ ಐಪಿಎಲ್‌ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕನ್ನಡಿಗ ದೇವದತ್ ಪಡಿಕ್ಕಲ್ ಕ್ರಿಕೆಟ್ ಪ್ರಿಯರ ಗಮನ ಸೆಳೆದಿದ್ದಾರೆ. ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 20 ವರ್ಷದ ಯುವ ಆರ್‌ಸಿಬಿ ಆಟಗಾರ ಪಡಿಕ್ಕಲ್‌ 36 ಎಸೆತದಲ್ಲಿ ಅರ್ಧಶತಕ ಚಚ್ಚಿ ಅಂತಿಮವಾಗಿ 56 ರನ್‌(42 ಎಸೆತ, 8 ಬೌಂಡರಿ) ಹೊಡೆದು ಔಟಾದರು.

 

 

ದೇವದತ್ ಮೊದಲ ಪಂದ್ಯದಲ್ಲಿ ಯಾವುದೇ ರೀತಿಯ ಅಂಜಿಕೆಯಿಲ್ಲದೆ ಮುನ್ನಗ್ಗಿ ಬಾರಿಸಿದ ರೀತಿಗೆ ಅನುಭವಿ ಆಟಗಾರರು ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.ಟೀಮ್ ಇಂಡಿಯಾದ ಮಾಜಿ ನಾಯಕ ಬಿಸಿಸಿಐ ಅದ್ಯಕ್ಷ ಸೌರವ್ ಗಂಗೂಲಿ ದೇವದತ್ ಪಡಿಕ್ಕಲ್ ಪ್ರದರ್ಶನಕ್ಕೆ ಟ್ವೀಟ್ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

 

 

ಇನ್ನು ದೇವದತ್ ಪಡಿಕ್ಕಲ್ ಪ್ರದರ್ಶನದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. “ದೇವದತ್ ಪಡಿಕ್ಕಲ್ ಆಟವನ್ನು ನಾನು ತುಂಬಾ ಆನಂದಿಸಿದ್ದೇನೆ. ಎಡಗೈ ಆಟಗಾರನ ಸುಲಲಿತ ಬ್ಯಾಟಿಂಗ್ ನೋಡುವುದು ಆಕರ್ಷಕ” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top