fbpx
ಸಮಾಚಾರ

ಮದುವೆಯಾಗಿ 10 ದಿನಕ್ಕೆ ಗಂಡನ ವಿರುದ್ಧ ದೂರು ದಾಖಲಿಸಿದ ನಟಿ ಪೂನಂ ಪಾಂಡೆ: ಗಂಡನ ಅರೆಸ್ಟ್

ಬಾಲಿವುಡ್ ನಟಿ ಪೂನಂ ಪಾಂಡೆ ಗಂಡ ಸ್ಯಾಮ್ ಬಾಂಬೆಯನ್ನು ಗೋವಾದಲ್ಲಿ ಅರೆಸ್ಟ್ ಮಾಡಲಾಗಿದೆ. ಪೂನಂಗೆ ಕಿರುಕುಳ ಕೊಟ್ಟು ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ಪೂನಂ ಆರೋಪ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೂನಂ ಪಾಂಡೆ ಹಾಗೂ ಸ್ಯಾಮ್ ಬಾಂಬೆ ಜೋಡಿ ಸೆಪ್ಟೆಂಬರ್ 11ರಂದು ಮದುವೆಯಾಗಿದ್ದರು ಆದರೆ ಮದುವೆಯಾದ ಹೊಸದರಲ್ಲಿ ಗೋವಾಕ್ಕೆ ಬಂದಿದ್ದ ಜೋಡಿ ಇಲ್ಲಿ ಪತಿ ಸ್ಯಾಮ್ ನಟಿ ಪೂನಂ ಪಾಂಡೆಗೆ ಕಿರುಕುಳ ಹಾಗೂ ಜೀವ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಪೂನಂ ಪಾಂಡೆ ಸೋಮವಾರ ರಾತ್ರಿ ದಕ್ಷಿಣ ಗೋವಾದ ಕಾನಕೋನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಇಲ್ಲಿನ ಪೊಲೀಸ್ ಅಧಿಕಾರಿ ತುಕಾರಾಮ್ ಚವಾಣ್ ಪೂನಂ ಪಾಂಡೆ ನಮ್ಮ ಠಾಣೆಯಲ್ಲಿ ಪತಿ ಸ್ಯಾಮ್ ನನಗೆ ಕಿರುಕುಳ ನೀಡುತ್ತಿದ್ದಾರೆ ಜೊತೆಗೆ ನನ್ನ ಜೀವಕ್ಕೆ ಅಪಾಯವಿದೆ ಇದೆ ಎಂದು ದೂರು ನೀಡಿದ್ದು ಇದರ ಪರಿಣಾಮ ಮಂಗಳವಾರ ಸ್ಯಾಮ್ ಬಾಂಬೆ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 11, 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಪೂನಂ, ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ‘ನಿಮ್ಮೊಂದಿಗೆ ಏಳು ಜನ್ಮ ಎದುರು ನೋಡುತ್ತಿದ್ದೇನೆ’ ಎಂದು ಕ್ಯಾಪ್ಶನ್ ನೀಡಿದ್ದರು. ಕಳೆದ ಜುಲೈ ತಿಂಗಳಲ್ಲಿ ಬಹುಕಾಲದ ಗೆಳೆಯ ಸ್ಯಾಮ್ ಬೊಂಬೆ ಜೊತೆ ಪೂನಂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 46 ವರ್ಷದ ಸ್ಯಾಮ್ ಬೊಂಬೆ ಮೂಲತಃ ನಿರ್ದೇಶಕರು. ಈ ಜೋಡಿಯ ನಿಶ್ಚಿತಾರ್ಥ ಹಾಗೂ ಮದುವೆಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top