fbpx
ಸಮಾಚಾರ

ಕೊರೋನಾ ಸೋಂಕು: ಖ್ಯಾತ ಹಾಸ್ಯ ನಟ ವೇಣುಗೋಪಾಲ್‌ ನಿಧನ

ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಕೊಸುರಿ ವೇಣುಗೋಪಾಲ್ ನಿಧನ ಹೊಂದಿದ್ದಾರೆ. ಕೋವಿಡ್-19 ನಿಂದ ಬಳಲುತ್ತಿದ್ದ ವೇಣುಗೋಪಾಲ್ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಉಸಿರಾಟದ ತೊಂದರೆ ಆಗುತ್ತಿದ್ದ ಕಾರಣ ಕಳೆದ 23 ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದರು, ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲವಾದರೂ ಕುಟುಂಬಸ್ಥರು ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಚಿಕಿತ್ಸೆ ವಿಫಲವಾದ ಕಾರಣ ಸೆಪ್ಟೆಂಬರ್ 23ರಂದ ನಿಧನರಾಗಿದ್ದಾರೆ.

ಆಂಧ್ರಪ್ರದೇಶದ ನರ್ಸಾಪುರದ ವೇಣುಗೋಪಾಲ್ 1994ರಲ್ಲಿ ‘Thegimpu’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ಕೆಲವು ವರ್ಷಗಳ ಹಿಂದೆ ಎಸ್‌ಎಸ್‌ ರಾಜಮೌಳಿ ಅವರ ‘ಮರ್ಯಾದೆ ರಾಮಣ್ಣ’, ‘ಚಲೋ’ ಹಾಗೂ ‘ವಿಕ್ರಮಾದ್ರು’ ಚಿತ್ರಗಳು ಇವರಿಗೆ ಹೆಚ್ಚಿನ ಖ್ಯಾತಿ ತಂದು ಕೊಟ್ಟಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top