fbpx
ಸಮಾಚಾರ

ಮಗು ಹುಟ್ಟಿತು ಎಂದು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಚಿರು ಪತ್ನಿ ಮೇಘನಾ ರಾಜ್​ ಮನವಿ

ನಟ ಚಿರು ಸರ್ಜಾ ನಿಧನರಾದ ನಂತರ ಸರ್ಜಾ ಕುಟುಂಬದ ಬಗ್ಗೆ ಅದರಲ್ಲೂ ಗರ್ಭಿಣಿಯಾಗಿರುವ ಮೇಘನಾ ರಾಜ್​ ಹೆರಿಗೆಯ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದಾವೆ. ಅದರಲ್ಲೂ ಕೆಲ ಯೂಟ್ಯೂಬ್​ ವಾಹಿನಿಗಳು ಇಲ್ಲಸಲ್ಲದ ರೀತಿಯಲ್ಲಿ ಬಿಂಬಿಸುತ್ತಿವೆ. ಇವುಗಳ ವಿರುದ್ಧ ಇದೀಗ ಮೇಘನಾ ಗರಂ ಆಗಿದ್ದಾರೆ.

 

 

ಟ್ವಿಟ್ಟರ್ ನಲ್ಲಿ ಎರಡು ಯೂಟ್ಯೂಬ್​ ವಾಹಿನಿಗಳ ಸ್ಕ್ರೀನ್​ ಶಾಟ್​ ಶೇರ್ ಮಾಡಿಕೊಂಡಿರುವ ಮೇಘನಾ, ಇಂಥ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಅಭಿಮಾನಿಗಳಿಗೆ ಮತ್ತು ಸೋಷಿಯಲ್​ ಮೀಡಿಯಾ ಫಾಲೋವರ್ಸ್​​ಗಳಲ್ಲಿ ಮನವಿ ಮಾಡಿದ್ದಾರೆ. ‘ಮೇಘನಾಗೆ ಅವಳಿ ಗಂಡು ಮಕ್ಕಳಾಗಿವೆ. ಮಗು ಹಿಡಿದು ಕಣ್ಣೀರು ಹಾಕಿದ್ದಾರೆ. ಬೆಳ್ಳಂಬೆಳಗ್ಗೆ ಹೆರಿಗೆಗೆ ಹೋಗುವ ಮುನ್ನ ಚಿರು ಸಮಾಧಿ ಬಳಿ ಹೋಗಿ ಮೇಘನಾ ಮಾಡಿದ್ದೇನು” ಎಂದು ಬರೆದಿರುವ ಸ್ಕ್ರೀನ್ ಶಾಟ್ ಇವಾಗಿವೆ.

 

 

‘ಎಲ್ಲರಿಗೂ ನಮಸ್ಕಾರ, ಈ ವಿಚಾರದ ಬಗ್ಗೆ ಶೀಘ್ರವೇ ನಾನೇ ಹೇಳುತ್ತೇನೆ. ಅಲ್ಲಿಯವರೆಗೂ ನನ್ನ ಅಭಿಮಾನಿಗಳಲ್ಲಿ ಮಾಡಿಕೊಳ್ಳುವ ಮನವಿ ಏನೆಂದರೆ, ಇಂಥ ಸುಳ್ಳು ಸುದ್ದಿಗಳತ್ತ ಗಮನ ಹರಿಸಬೇಡಿ. ಸತ್ಯ ಏನೆಂದು ತಿಳಿಯದೇ ವೀಕ್ಷಕರನ್ನು ಹೆಚ್ಚಿಸಿಕೊಳ್ಳಲು ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಈ ರೀತಿ ಮಾಡುತ್ತಿದ್ದಾರೆ. ಹಾಗೇನಾದರೂ ಹೇಳುವುದಿದ್ದರೆ ನಾನೇ ಹೇಳುತ್ತೇನೆ ” ಎಂದು ಮೇಘನಾ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top