fbpx
ಸಮಾಚಾರ

ಶೂಟಿಂಗ್​ ಸೆಟ್​ನಲ್ಲೇ ಪ್ರಾಣಬಿಟ್ಟ ಹಿರಿಯ ನಟನ ಕೊನೇ ಫೋಟೋ ಇದು!

ಸ್ಯಾಂಡಲ್​ವುಡ್​​ನ ಖ್ಯಾತ ಪೋಷಕ ನಟ ರಾಕ್​ಲೈನ್​ ಸುಧಾಕರ್​ ವಿಧಿವಶರಾಗಿದ್ದಾರೆ. ಇಂದು ಸಿನಿಮಾ ಶೂಟಿಂಗ್​​ನಲ್ಲಿ ತೊಡಗಿದ್ದ ವೇಳೆ, ಚಿತ್ರೀಕರಣದ ಸ್ಪಾಟ್​​ನಲ್ಲೇ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.

ಬೆಂಗಳೂರು ಕಮಲನಗರ ನಿವಾಸಿಯಾಗಿದ್ದ ಸುಧಾಕರ್​ಗೆ ಕೆಲ ದಿನಗಳ ಹಿಂದಷ್ಟೇ ಕೊರೋನಾ ಸೋಂಕು ತಗುಲಿತ್ತು. ಇದಕ್ಕಾಗಿ ಅವರು ಚಿಕಿತ್ಸೆ ಪಡೆದು ಬಂದಿದ್ದರು. ಅವರು ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಮತ್ತೆ ಶೂಟಿಂಗ್​ ಕೆಲಸಗಳಲ್ಲಿ ಪಾಲ್ಗೊಂಡಿದ್ದರು.

 

 

ಪುಷ್ಕರ್‌ ಮಲಿಕಾರ್ಜುನಯ್ಯ ನಿರ್ಮಾಣದ ‘ಶುಗರ್‌ಲೆಸ್‌’ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸುಧಾಕರ್‌ ಮೇಕಪ್‌ ಹಾಕಿಕೊಳ್ಳುತ್ತಿದ್ದಾಗ, ಕುಸಿದು ಬಿದ್ದಿದ್ದಾರೆ, ಸುಮಾರು 10 ಗಂಟೆಗೆ ನಿಧನರಾಗಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ ಶೂಟಿಂಗ್ ಸೆಟ್​ನಲ್ಲೇ ಸುಧಾಕರ್​ ತಿಂಡಿ ಸೇವಿಸಿದ್ದರು. ಈ ವೇಳೆ ಕ್ಲಿಕ್ಕಿಸಿದ ಫೋಟೋವೇ ಅವರು ಬದುಕಿದ್ದಾಗ ತೆಗೆದ ಕೊನೇ ಫೋಟೋ ಎನ್ನಲಾಗಿದೆ.

ಸ್ಯಾಂಡಲ್‌ವುಡ್‌ ಸ್ಟಾರ್‌ ನಟರ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದ ಸುಧಾಕರ್‌ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ‘ಪಂಚರಂಗಿ’, ‘ಅಧ್ಯಕ್ಷ’, ‘ಅಜಿತ್’, ‘ನಾ ಕೋಳಿಕೇರಂಗ’. ಅಲ್ಲದೇ ಅನೇಕ ಚಿತ್ರಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top