fbpx
ಸಮಾಚಾರ

ಐಪಿಎಲ್ 2020::ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮಂದಗತಿಯ ಬೌಲಿಂಗ್‌ ನಡೆಸಿದ ಕಾರಣ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ 12 ಲಕ್ಷ ರೂ. ದಂಡ ತೆರುವಂತಾಗಿದೆ.

ದುಬೈ ಇಂಟರ್‌ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ಸೆಪ್ಟೆಂಬರ್ 24) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ ಕಾರಣಕ್ಕೆ ಕೊಹ್ಲಿಗೆ 12 ಲಕ್ಷ ದಂಡ ವಿಧಿಸಲಾಗಿದೆ.

ಟಿ20 ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡುವ ತಂಡಕ್ಕೆ ಡ್ರಿಂಕ್ಸ್ ಬ್ರೇಕ್ ಸೇರಿಸಿ 75 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ನಿಗಧಿತ ಕಾಲಾವಧಿಯೊಳಗೆ 20 ಓವರ್‍ಗಳನ್ನು ತಂಡದ ನಾಯಕ ಮುಗಿಸಬೇಕಿರುತ್ತದೆ. ಅವಧಿಯೊಳಗೆ ಓವರ್ ಮುಕ್ತಾಯ ಮಾಡದಿದ್ದರೇ ಪಂದ್ಯದ ರೆಫ್ರಿ ದಂಡವನ್ನು ವಿಧಿಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top