fbpx
ಸಮಾಚಾರ

ಕೊಹ್ಲಿ ಕುರಿತು ವ್ಯಂಗ್ಯ ಮಾಡುವ ಭರದಲ್ಲಿ ಅನುಷ್ಕಾ ಕುರಿತು ಕೀಳು ಹೇಳಿಕೆ: ವಿವಾದದಲ್ಲಿ ಗವಾಸ್ಕರ್

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಎರಡು ಕ್ಯಾಚ್ ಕೈಚೆಲ್ಲಿದ್ದರು. ಈ ಕುರಿತಂತೆ ವಿಶ್ಲೇಷಣೆ ನೀಡಿದ್ದ ಗವಾಸ್ಕರ್ ಅವರ ಕಾಮೆಂಟ್‍ಗಳು ಸದ್ಯ ವಿವಾದಕ್ಕೆ ಕಾರಣವಾಗಿದೆ.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ರಾಯಲ್ ಚಾಲೆಂಜರ್ಸ್-ಕಿಂಗ್ಸ್‌ ಇಲೆವೆನ್ ಪಂಜಾಬ್‌ ನಡುವಿನ ಪಂದ್ಯದಲ್ಲಿ ಕಾಮೆಂಟರಿ ನೀಡುತ್ತಿದ್ದ ಸುನಿಲ್ ಗವಾಸ್ಕರ್ ಕೊಹ್ಲಿ ಕುರಿತು ನೀಡಿದ ಹೇಳಿಕೆ ಇದೀಗ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಕಮೆಂಟರಿ ವೇಳೆ ಗವಾಸ್ಕರ್ ಅವರು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಅವರ ವಿಚಾರ ಮಾತನಾಡಿದ್ದು ಮಾತ್ರವಲ್ಲದೇ ಅವರ ಕುರಿತಂತೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಆಗ ಕಾಮೆಂಟರಿ ನೀಡುತ್ತಿದ್ದ ಸುನಿಲ್ ಗವಾಸ್ಕರ್ ಕೊಹ್ಲೀನ ಟೀಕಿಸುವ ಭರದಲ್ಲಿ ಅನುಷ್ಕಾಳನ್ನು ಉಲ್ಲೇಖಿಸಿದ್ದರು. ‘Inhone lockdown me to bas Anushka ki gendon ki practice ki hai’ (ಲಾಕ್‌ ಟೈಮ್ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳೊಂದಿಗೆ ಅಭ್ಯಾಸ ಮಾಡಿದ್ದಾರೆ) ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.

ಅನುಷ್ಕಾ ಶರ್ಮಾ ದೂಷಣೆಗೆ ಒಳಗಾಗುತ್ತಿರುವುದು ಇದೇ ಮೊದಲೇನೇಲ್ಲ. ವಿರಾಟ್‌ ಕೊಹ್ಲಿ ಕ್ರಿಕೆಟ್‌ನಲ್ಲಿ ವೈಫಲ್ಯ ಅನುಭವಿಸಿದಾ ಅನುಷ್ಕಾ ಅವರನ್ನು ಚರ್ಚೆಗೆ ಎಳೆದು ತರುವ ಪ್ರಯತ್ನಗಳು ಈಗಾಗಲೇ ಕೆಲ ಬಾರಿ ನಡೆದು ಹೋಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top