fbpx
ಸಮಾಚಾರ

ಮದುವೆಯಾಗಿ ಎರಡೇ ವಾರಕ್ಕೆ ವಿಚ್ಛೇದನಕ್ಕೆ ಮುಂದಾದ ನಟಿ ಪೂನಂ ಪಾಂಡೆ

ಮದುವೆಯಾದ ಎರಡು ವಾರದಲ್ಲೇ ಪತಿ ವಿರುದ್ಧ ದೂರು ನೀಡಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಇದೀಗ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಪತಿ ಸ್ಯಾಮ್ ಬಾಂಬೆ ತನಗೆ ಕಿರುಕುಳ ನೀಡಿ ಬೆದರಿಕೆ ಹಾಕುತ್ತಾನೆ ಎಂದು ಹೇಳಿ ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಗೋವಾ ಪೊಲೀಸರು ಸ್ಯಾಮ್ ನನ್ನು ಬಂಧಿಸಿದ್ದರು.

‘ಸ್ಯಾಮ್​ ಹಾಗೂ ತನ್ನ ಮಧ್ಯೆ ಮೊದಲಿನಿಂದಲೂ ಜಗಳ ನಡೆಯುತ್ತಿತ್ತು,. ಕಳೆದ ಮೂರು ವರ್ಷಗಳಿಂದ ನಮ್ಮ ಸಂಬಂಧ ಹೀಗೆ ಸಾಗಿತ್ತು. ಮದುವೆಯಾದ ನಂತರ ಸರಿ ಹೋಗಬಹುದೆಂದು ವಿವಾಹವಾದೆ. ಆದರೆ ಯಾವುದೂ ದರಿ ಹೋಗಲಿಲ್ಲ. ಆದರೆ ಈ ಬಾರಿ ನಾನು ನಿರ್ಧಾರ ಮಾಡಿದ್ದೇನೆ. ಪ್ರಾಣಿಗೆ ಹೊಡೆದಂತೆ ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ಜೊತೆ ನಾನು ಬಾಳಲಾರೆ. ಇಂತಹ ದೌರ್ಜನ್ಯದ ಸಂಸಾರದಲ್ಲಿ ಇರುವುದಕ್ಕಿಂತ ಒಂಟಿ ಆಗಿರುವುದೇ ವಾಸಿ ಅಂತ ನಿರ್ಧರಿಸಿದ್ದೇನೆ’ ಎಂದು ಪೂನಂ ಹೇಳಿದ್ದಾರೆ.

ಅಂದು ಯಾವುದೋ ಒಂದು ವಿಷಯಕ್ಕೆ ಸ್ಯಾಮ್​ ಹಾಗೂ ನನ್ನ ನಡುವೆ ವಾದ ಆರಂಭವಾಯಿತು. ಮಾತನಾಡುತ್ತಿದ್ದಂತೆಯೇ ಸ್ಯಾಮ್​ ತನ್ನ ಮೇಲೆ ಕೈ ಮಾಡಿದರು. ನಂತರ ಮುಖಕ್ಕೆ ಪಂಚ್ ಮಾಡಿ, ಕೂದಲು ಹಿಡುದು ಎಳೆದಾಡಿದ್ದರಂತೆ. ಸಾಲದಕ್ಕೆ ಕುತ್ತಿಗೆ ಸಹ ಹಿಸುಕಲು ಪ್ರಯತ್ನಿಸಿದರು ಎಂದು ಪೂನಂ ತಮ್ಮ ಅಲಳು ತೋಡಿಕೊಂಡಿದ್ದಾರೆ.

ಸೆಪ್ಟೆಂಬರ್ 11, 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಪೂನಂ, ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ‘ನಿಮ್ಮೊಂದಿಗೆ ಏಳು ಜನ್ಮ ಎದುರು ನೋಡುತ್ತಿದ್ದೇನೆ’ ಎಂದು ಕ್ಯಾಪ್ಶನ್ ನೀಡಿದ್ದರು. ಕಳೆದ ಜುಲೈ ತಿಂಗಳಲ್ಲಿ ಬಹುಕಾಲದ ಗೆಳೆಯ ಸ್ಯಾಮ್ ಬೊಂಬೆ ಜೊತೆ ಪೂನಂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 46 ವರ್ಷದ ಸ್ಯಾಮ್ ಬೊಂಬೆ ಮೂಲತಃ ನಿರ್ದೇಶಕರು. ಈ ಜೋಡಿಯ ನಿಶ್ಚಿತಾರ್ಥ ಹಾಗೂ ಮದುವೆಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top