fbpx
ಸಮಾಚಾರ

ದೇವರು ಇನ್ನೊಂದು ಜನ್ಮ ಕೊಟ್ಟರೆ ಕನ್ನಡಿಗನಾಗಿ ಹುಟ್ಟಲು ಇಷ್ಟಪಡ್ತೀನಿ ಅಂದಿದ್ರು ಎಸ್​ಪಿಬಿ

ದಕ್ಷಿಣ ಭಾರತದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡ ಅಂದರೆ ಅದೇನೋ ಪ್ರೀತಿ. ಮುಂದಿನ ಜನ್ಮದಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡುತ್ತೇನೆ ಎಂದು ಅನೇಕ ಬಾರಿ ಹೇಳಿದ್ದರು.

ಇದೇ ವರ್ಷದ ಫೆ.1ರಂದು ಜಿಲ್ಲೆಯ ಗೋಕಾಕದಲ್ಲಿ ಇಲ್ಲಿನ ಶೂನ್ಯ ಸಂಪಾದನ ಮಠದ ಕಾಯಕ ಯೋಗಿ ಲಿಂ.ಬಸವ ಸ್ವಾಮೀಜಿ ಅವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ-2020 ಸಮಾರಂಭದಲ್ಲಿ ಶ್ರೀಮಠದ ವತಿಯಿಂದ ನೀಡಲಾದ ₹ 1 ಲಕ್ಷ ನಗದು ಒಳಗೊಂಡಿರುವ ‘ಕಾಯಕಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದ್ದರು.

‘ ಭಾರತದಲ್ಲಿ ಇರುವ 15 ಭಾಷೆಗಳಲ್ಲಿ ಹಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಬೇರೆಯವರಿಗೂ ಈ ವಿದ್ಯೆ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆಂಧ್ರದಲ್ಲಿ ಹುಟ್ಟಿ ಬೆಳೆದರೂ ಹಿನ್ನೆಲೆ ಗಾಯಕನಾಗಿ ಹಾಡಿದ 2ನೇ ಹಾಡೇ ಕನ್ನಡದ್ದು. ಅಲ್ಲಿಂದ ಪ್ರಾರಂಭವಾದ ಈ ಪಯಣ ಇಲ್ಲಿವರೆಗೆ ಬಂದಿದೆ. ಕನ್ನಡಿಗರ ಪ್ರೀತಿ ಮರೆಯಲು ಸಾಧ್ಯವಿಲ್ಲ’ ಎಂದು ಮನದುಂಬಿ ನೆನೆದಿದ್ದರು.

‘ಈ ಮಟ್ಟಿಗೆ ಕನ್ನಡಿಗರು ನನಗೆ ಅಭಿಮಾನ ತೋರುವುದು ನನಗೆ ಪುಣ್ಯ. ಕನ್ನಡ ಬಾರದ ನನಗೆ ಅವಕಾಶಗಳನ್ನು ನೀಡಿ ಬೆಳೆಸಿದವರು. ಆಂಧ್ರದಲ್ಲಿ ಹುಟ್ಟಿದರೂ ನಾನು ಕನ್ನಡಿಗ. ಕನ್ನಡಿಗರ ಈ ಅಭಿಮಾನ ತೀರಿಸಲು ಮುಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗೆ ಹುಟ್ಟುಬೇಕು’ ಎಂದಿದ್ದರು ಎಸ್​ಪಿಬಿ.

ಪಿಬಿ ಶ್ರೀನಿವಾಸ್​ ಸಂಗೀತ ನಿರ್ದೇಶನದಲ್ಲಿ ಮೊದಲ ಬಾರಿಗೆ 1966ರಲ್ಲಿ ನಕ್ಕರೆ ಅದೇ ಸ್ವರ್ಗ ಚಿತ್ರದ ಮೂಲಕ ತಮ್ಮ ಪಯಣವನ್ನು ಕನ್ನಡದಲ್ಲಿ ಆರಂಭಿಸಿದರು. ಕನ್ನಡಿಗರು ಕೂಡ ಅವರನ್ನು ಮೆಚ್ಚಿ ಒಪ್ಪಿಕೊಂಡರು. ಡಾ.ರಾಜ್​ಕುಮಾರ್​, ವಿಷ್ಣುವರ್ಧನ್​ ಸೇರಿದಂತೆ ಅನೇಕ ಯುವ ಕಲಾವಿದರಿಗೂ ಹಾಡಿದ ಖ್ಯಾತಿ ಅವರದು. ಅದರಲ್ಲಿಯೂ ವಿಷ್ಣವರ್ಧನ್​ ಚಿತ್ರ ಎಂದರೇ ಎಸ್​ಪಿಬಿ ದನಿ ಎಂಬುವಷ್ಟರ ಮಟ್ಟಿಗೆ ಅವರ ಛಾಪು ಮೂಡಿತು. . ಕನ್ನಡ ಸ್ಟಾರ್​ ನಟ ಇರಲಿ, ಹೊಸಬರಿರಲಿ ಅವರಿಗೆ ಎಸ್​ಪಿಬಿ ದನಿಯಾಗುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top