fbpx
ಸಮಾಚಾರ

ಡ್ರ*ಗ್ಸ್ ಕೇಸ್: NCB ಮುಂದೆ ವಿಚಾರಣೆಗೆ ಹಾಜರಾದ ನಟಿ ದೀಪಿಕಾ ಪಡುಕೋಣೆ

ಮಾದಕ ವಸ್ತು ಸೇವನೆ ಪ್ರಕರಣ ಸಂಬಂಧ ಬಾಲಿವುಡ್’ನ ಖ್ಯಾತ ನಟಿ ದೀಪಿಕಾ ಪಡುಕೋಣೆಯವರು ಶನಿವಾರ ಮಾದಕ ವಸ್ತು ನಿಯಂತ್ರಣ ದಳ (ಎನ್’ಸಿಬಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಡ್ರಗ್ಸ್​ ಬಳಕೆ ಆರೋಪ ಕೇಳಿಬಂದ ಬೆನ್ನಲ್ಲೇ ಹಲವು ನಟಿಯರಿಗೆ ನೋಟಿಸ್​ ಜಾರಿಯಾಗಿದೆ. ದೀಪಿಕಾ ಮ್ಯಾನೇಜರ್ ಕರೀಷ್ಮಾ ಪ್ರಕಾಶ್​ ಅವರ​ ಮೊಬೈಲ್​ನಲ್ಲಿ ಪತ್ತೆಯಾದ ಡ್ರಗ್ಸ್ ಬಗೆಗಿನ ಮೆಸೇಜ್​ ಸಂಬಂಧ ವಿಚಾರಣೆ ನಡೆಸಲು ಎನ್​​ಸಿಬಿ ನೋಟಿಸ್​ ನೀಡಿತ್ತು.

ಬಾಲಿವುಡ್’ನ ದೀಪಿಕಾ ಪಡುಕೋಣೆಯವರು ಡ್ರಗ್ಸ್’ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದ ವಾಟ್ಸ್’ಆಪ್ ಗ್ರೂಪ್’ಗೆ ದೀಪಿಕಾ ಅವರೇ ಆಡ್ಮಿನ್ ಆಗಿದ್ದರು ಎಂದು ಹೇಳಲಾಗುತ್ತಿದೆ. ಕ್ವಾನ್ ಕಂಪನಿಯಲ್ಲಿ ಟ್ಯಾಲೆಟ್ ಮ್ಯಾನೇಜರ್ ಆಗಿರುವ ಜಯಾ ಸಹಾ ಎಂಬಾಕೆ ಈ ಗ್ರೂಪ್ ಮಾಡಿದ್ದು, ಅದರಲ್ಲಿ ದೀಪಿಕಾ ಅವರ ಮ್ಯಾನೇಜರ್ ಆಗಿರುವ ಕರೀಷ್ಮಾ ಪ್ರಕಾಶ್ ಅವರೂ ಕೂಡ ಆಡ್ಮಿನ್ ಆಗಿದ್ದರು ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top