fbpx
ಸಮಾಚಾರ

ಡ್ರ*ಗ್ಸ್ ಕೇಸ್: ಕೊನೆಗೂ ವಿಚಾರಣೆಗೆ ಹಾಜರಾದ ನಿರೂಪಕಿ ಅನುಶ್ರೀ

ಮಂಗಳೂರು ಮಾದಕ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಸಿಬಿ ವಿಚಾರಣೆಗೆ ಗೈರಾಗಿದ್ದ ಸ್ಯಾಂಡಲ್ ವುಡ್ ನಟಿ ನಿರೂಪಕಿ ಅನುಶ್ರೀ ಇಂದು ಹಾಜರಾಗಿದ್ದಾರೆ.

ವಿಚಾರಣೆಗೆ ಹಾಜರಾಗಲು ಸೆ.29ರ ಮೊದಲು ಹಾಜರಾಗುವಂತೆ ಪೊಲೀಸರು ನೋಟಿಸ್‌ ನೀಡಿದ್ದರು. ಆದರೆ ಅನುಶ್ರೀ ಸೆ.25ರಂದೇ ಹಾಜರಾಗುವುದಾಗಿ ತಿಳಿಸಿದ್ದರು. ಅದರಂತೆ ಪೊಲೀಸರು ಅನುಶ್ರೀ ಶುಕ್ರವಾರ ವಿಚಾರಣೆಗೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಸಂಜೆಯವರೆಗೂ ಅನುಶ್ರೀ ವಿಚಾರಣೆಗೆ ಬಂದಿರಲಿಲ್ಲ.

ಬೆಳಿಗ್ಗೆಯೇ ಸಿಸಿಬಿ ಕಚೇರಿಗೆ ಬಂದ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದಾರೆ. ಅನುಶ್ರೀಯನ್ನು ಪಣಂಬೂರು ಎಸಿಪಿ ಬೆಳ್ಳಿಯಪ್ಪ ನೇತೃತ್ವ ಪಣಂಬೂರು ಸಿಸಿಬಿ ತಂಡ ವಿಚಾರಣೆ ನಡೆಸುತ್ತಿದೆ

ವಿಚಾರಣೆ ಬಗ್ಗೆ ಅನುಶ್ರೀ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ‘ಪ್ರಸ್ತುತ ಚರ್ಚೆ ಆಗುತ್ತಿರುವ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ. ವಿಚಾರಣೆಗೆ ಕರೆದಕೂಡಲೇ ನಾನು ಅಪರಾಧಿ ಅಲ್ಲ. ಪೊಲೀಸರಿಗೆ ನಾನು ನನಗೆ ತಿಳಿದ ಮಾಹಿತಿ ನೀಡಿ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ಅವರು ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top