fbpx
ಸಮಾಚಾರ

ಮತ್ತೊಂದು ಕಿಡ್ನಾಪ್ ಪ್ರಕರಣದಲ್ಲಿ ಸುನಾಮಿ ಕಿಟ್ಟಿ ಹೆಸರು; ಸಂಕಷ್ಟದಲ್ಲಿ ಬಿಗ್‌ಬಾಸ್ ಮಾಜಿ ಸ್ಪರ್ಧೆ

‘ಬಿಗ್ ಬಾಸ್’ ಸೇರಿದಂತೆ ಕನ್ನಡದ ಕೆಲವು ರಿಯಾಲಿಟಿ ಶೋ ಗಳ ಮೂಲಕ ಹೆಸರು ಮಾಡಿದ್ದಾತ ಸುನಾಮಿ ಕಿಟ್ಟಿ. ಇಂಥಾ ಕಿಟ್ಟಿಯನ್ನು ವರ್ಷದ ಹಿಂದೆಯಷ್ಟೇ ಕಿಡ್ನ್ಯಾಪ್ ಕೇಸೊಂದರಲ್ಲಿ ಚೇಲಾಗಳ ಸಮೇತ ಪೊಲೀಸರು ಜೈಲಿಗಟ್ಟಿದ್ದರು. ನಂತರ ಈ ಕೇಸಿಗೆ ಸಂಬಂಧಿದಂತೆ ಜಾಮೀನು ಪಡೆದು ಆಚೆ ಓಡಾಡಿಕೊಂಡು ಇರುವ ಕಿಟ್ಟಿ ವಿರುದ್ಧ ಇದೀಗ ಮತ್ತೊಮ್ಮೆ ಆರೋಪ ಕೇಳಿಬಂದಿದೆ.

ಬೆಂಗಳೂರಿನಲ್ಲಿ ಫೈನಾನ್ಶಿಯರ್ ನವೀನ್​ ಎಂಬಾತನನ್ನು​​ ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುನಾಮಿ ಕಿಟ್ಟಿ ಸಹಚರರು ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಬಂಧಿತ ಆರೋಪಿಗಳಾದ ಮೋಹನ್, ಮಹೇಶ್, ನವ್ಯಂತ್, ಜೋಸೆಫ್, ಭರತ್, ರಾಜು ಹಾಗೂ ರವಿಕಿರಣ್ ಎಂಬುವವರು ಸುನಾಮಿ ಕಿಟ್ಟಿ ಹೆಸರನ್ನು ಬಾಯ್ಬಿಟ್ಟಿದ್ದು, ಫೈನಾನ್ಶಿಯರ್ ನವೀನ್ ನಿಂದ ಸುನಾಮಿ ಕಿಟ್ಟಿ ಹಣ ಪಡೆದಿದ್ದು, ಇದೇ ವಿಚಾರಕ್ಕೆ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಸುನಾಮಿ ಕಿಟ್ಟಿ ಆರೋಪಿಗಳು ಮತ್ತು ನವೀ‌ನ್ ಜಗಳದ ವೇಳೆ ಮಧ್ಯಪ್ರವೇಶ ಮಾಡಿ ನವೀನ್​​ಗೆ ಅವಾಜ್ ಹಾಕಿದ್ದ ಎನ್ನಲಾಗಿದೆ. ಸದ್ಯ ಕಿಡ್ನಾಪ್​​ ಪ್ರಕರಣದಲ್ಲಿ ಸುನಾಮಿ ಕಿಟ್ಟಿಯ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top