fbpx
ಸಮಾಚಾರ

“ಕಂಗನಾಳನ್ನು ಯಾಕೆ ಅರೆಸ್ಟ್ ಮಾಡಿಲ್ಲ” NCBಗೆ ನಟಿ ನಗ್ಮಾ ಪ್ರಶ್ನೆ

ಈ ಹಿಂದೆ ಡ್ರಗ್ಸ್ ಸೇವಿಸುತ್ತಿದ್ದೆ ಎಂದು ಸ್ವಯಂ ಒಪ್ಪಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿ ಬಿ) ಏಕೆ ಸಮನ್ಸ್ ಜಾರಿಗೊಳಿಸಿಲ್ಲ ಎಂದು ಬಾಲಿವುಡ್ ಮತ್ತೊಬ್ಬ ಹಿರಿಯ ನಟಿ, ಕಾಂಗ್ರೆಸ್ ನಾಯಕಿ ನಗ್ಮಾ ಪ್ರಶ್ನಿಸಿದ್ದಾರೆ.

 

 

ಎನ್‌ಸಿಬಿ ಅಧಿಕಾರಿಗಳು ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್‌, ಶ್ರದ್ಧಾ ಕಪೂರ್ ಅವರಿಗೆ ನೋಟಿಸ್ ನೀಡಿದ ಬಳಿಕ ಈ ಒಂದು ಪ್ರಶ್ನೆಯನ್ನು ನಗ್ಮಾ ಕೇಳಿದ್ದಾರೆ. ‘ವಾಟ್ಸಪ್‌ ಚಾಟ್‌ ನೋಡಿ ನೋಟಿಸ್ ನೀಡುವ ಎನ್‌ಸಿಬಿ ಅಧಿಕಾರಿಗಳು, ‘ನಾನು ಡ್ರಗ್ ಸೇವನೆ ಮಾಡಿದ್ದೇನೆ’ ಎಂದು ಕಂಗನಾ ರಣಾವತ್‌ ಹೇಳಿಕೊಂಡಿದ್ದರೂ, ಯಾಕೆ ಅವರಿಗೆ ನೋಟಿಸ್ ನೀಡಿಲ್ಲ. ಎನ್‌ಸಿಬಿ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುತ್ತ, ಜನಪ್ರಿಯ ನಟಿಯರ ಬಗ್ಗೆ ಕೆಟ್ಟದಾಗಿ ತೋರಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ ನಗ್ಮಾ.

ಇನ್ನು, ಇದೇ ಟ್ವೀಟ್‌ನಲ್ಲಿ ಎರಡು ಫೋಟೋಗಳನ್ನು ನಗ್ಮಾ ಶೇರ್ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಕಂಗನಾ ರಣಾವತ್, ಸುಶಾಂತ್ ಸಾವಿಗೆ ನ್ಯಾಯ ಕೇಳಿದರು. ಈಗ ಅವರದೇ ಸ್ವಂತ ರಾಜಕೀಯ ಅಜೆಂಡಗಳ ಮೂಲಕ ಬಾಲಿವುಡ್‌ ಅನ್ನು ವಿರೋಧ ಮಾಡುತ್ತಿದ್ದಾರೆ. ಬಿಹಾರದ ಪೊಲೀಸ್ ಅಧಿಕಾರಿ ಗುಪ್ತೇಶ್ವರ್ ಪಾಂಡೆ, ಸುಶಾಂತ್ ಸಾವಿಗೆ ನ್ಯಾಯ ಕೇಳಿದರು. ಈಗ ಅವರು ಸ್ವಯಂ ನಿವೃತ್ತಿ ಪಡೆದುಕೊಂಡು, ಬಿಜೆಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಜ್ಜಾಗಿದ್ದಾರೆ. ಸುಶಾಂತ್ ಸಿಂಗ್ ಸಾವಿನಿಂದ ಈ ಇಬ್ಬರಿಗೆ ಉಪಯುಕ್ತವಾಗಿದೆ ಎಂದು ಹೇಳುತ್ತಿರುವ ಒಂದು ಫೋಟೋವನ್ನು ನಗ್ಮಾ ಶೇರ್ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top