fbpx
ಸಮಾಚಾರ

ನಟ ಶರಣ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ವಿಶ್ರಾಂತಿಗೆ ಸೂಚನೆ

ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್ ಭಾನುವಾರ ಡಿಸ್ಚಾರ್ಜ್ ಆಗಿದ್ದಾರೆ. “ಅವತಾರ ಪುರುಷ” ಸಿನಿಮಾ ಚಿತ್ರೀಕರಣದ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆ ನಟ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆಗೆ ದಾಖಲಾದ ಬಳಿಕ, ಎಕ್ಸ್​ರೇ ಮಾಡಿದ ನಂತರ ಕಿಡ್ನಿ ಸ್ಟೋನ್​ ಆಗಿರೋದು ದೃಢಪಟ್ಟಿದೆ. ಹೀಗಾಗಿ ಡಾಕ್ಟರ್​ ಸಲಹೆಯ ಮೇರೆಗೆ ಒಂದು ದಿನದ ಮಟ್ಟಿಗೆ ಆಸ್ಪತ್ರೆಯಲ್ಲೇ ಆಡ್ಮಿಟ್​ ಆಗಿದ್ದರು. ಇದೀಗ ಡಿಸ್ಚಾರ್ಜ್​ ಆಗಿದ್ದಾರೆ. ಶರಣ್​ ಜೊತೆಯಲ್ಲಿ ಅವರ ಕುಟುಂಬಸ್ಥರು ಆಸ್ಪತ್ರೆಯ ಬಳಿ ಹಾಜರಿದ್ದರು.

ಕಿಡ್ನಿಯಲ್ಲಿ ಕಲ್ಲು ಪತ್ತೆಯಾಗಿದ್ದು ಮೂರು ದಿನ ವಿಶ್ರಾಂತಿಗೆ ಸೂಚಿಸಿದ್ದಾರೆ. ಹೊಟ್ಟೆ ನೋವು ಕಡಿಮೆಯಾಗದೆ ಹೋದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ ಎಂದು ಶರಣ್ ಅವರ ಸೋದರಿ ನಟಿ ಶ್ರುತಿ ಮಾಹಿತಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top