fbpx
ಸಮಾಚಾರ

ನಿಕೋಲಸ್ ಪೂರನ್ ಸೂಪರ್‌ಮ್ಯಾನ್ ಫೀಲ್ಡಿಂಗ್‌ಗೆ ಬೆರಗಾದ ಕ್ರಿಕೆಟ್ ಜಗತ್ತು: ವಿಡಿಯೋ

ಶಾರ್ಜಾ ಮೈದಾನದಲ್ಲಿ ನಡೆದ ಐಪಿಎಲ್​ನ 9ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ನೀಡಿದ ಬೃಹತ್ ಗುರಿ ಬೆನ್ನತ್ತಿ ರಾಜಸ್ಥಾನ್ ರಾಯಲ್ಸ್ ಹೊಸ ಇತಿಹಾಸ ಬರೆದಿದೆ. ಪಂಜಾಬ್ ನೀಡಿದ 224 ಟಾರ್ಗೆಟ್​ನ್ನು 19.3 ಓವರ್​ನಲ್ಲಿ ಗುರಿ ಮುಟ್ಟುವ ಮೂಲಕ ಸ್ಮಿತ್ ಪಡೆ 4 ವಿಕೆಟ್​ಗಳ ವಿಜಯ ಸಾಧಿಸಿದೆ. ಈ ಮಧ್ಯೆ ವೆಸ್ಟ್​ ಇಂಡೀಸ್​ ಆಟಗಾರ ಮಾಡಿದ ಅದ್ಭುತ ಫೀಲ್ಡಿಂಗ್​ ಎಲ್ಲರ ಗಮನ ಸೆಳೆದಿದೆ.

 

 

ಕಿಂಗ್ಸ್ ಇಲವೆನ್ ಪಂಜಾಬ್ ನೀಡಿದ ಬೃಹತ್ ಗುರಿಯನ್ನು ಆರ್‌ಆರ್‌ ನಾಯಕ ಸಂಜು ಸ್ಯಾಮ್ಸನ್ ಹಾಗೂ ಸ್ಟೀವ್ ಸ್ಮಿತ್ ಭರ್ಜರಿ ಆಟದ ಮೂಲಕ ಬೆನ್ನತ್ತಿದ್ದರು. ಈ ಸಂದರ್ಭದಲ್ಲ ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ ಮುರುಗನ್ ಅಶ್ವಿನ್ ಎಸೆದ ಎಸೆತವನ್ನು ಸಂಜು ಸ್ಯಾಮ್ಸನ್ ಭರ್ಜರಿಯಾಗಿ ಬೀಸಿ ಹೊಡೆದರು. ಎಲ್ಲರೂ ಈ ಹೊಡೆತ ಖಂಡಿತಾ ಸಿಕ್ಸರ್ ಎಂದೇ ಭಾವಿಸಿದರು.

 

 

ಆದರೆ ಈ ವೇಳೆ ಬೌಂಡರಿ ಲೈನ್‌ ಬಳಿ ಇದ್ದ ವಿಂಡೀಸ್‌ ಆಟಗಾರ ಪೂರನ್‌ ಗಾಳಿಯಲ್ಲಿ ಹಾರಿ ಬಾಲನ್ನು ತಡೆದು ಕ್ಷಣ ಮಾತ್ರದಲ್ಲಿ ಹಿಂದಕ್ಕೆ ಎಸೆದಿದ್ದರು. ಈ ಪ್ರಯತ್ನ ಯಶಸ್ವಿಯಾಗಿದೆಯೋ ಇಲ್ಲವೋ ಎಂಬುದನ್ನು ಟಿವಿ ರಿಪ್ಲೇಯಲ್ಲಿ ನೋಡಿದಾಗ ಪೂರನ್‌ ಫೀಲ್ಡಿಂಗ್‌ ಯಶಸ್ವಿಯಾಗಿರುವುದು ಸೆರೆಯಾಗಿತ್ತು. ಬಾಲ್‌ ಕೈಗೆ ಸಿಕ್ಕಿದ ಕೂಡಲೇ ಅದನ್ನು ಹಿಂದಕ್ಕೆ ಹಾಕಿದ ಪ್ರಯತ್ನ ಕಂಡು ಪೂರನ್‌ ಅವರನ್ನು ಅಭಿಮಾನಿಗಳು ಸೂಪರ್‌ ಮ್ಯಾನ್‌ಗೆ ಹೋಲಿಸಿ ಅಭಿನಂದಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top