fbpx
ಸಮಾಚಾರ

“ನನ್ನ ಜೀವನದಲ್ಲೇ ಇಂತಹ ನೋವು ಅನುಭವಿಸಿರಲಿಲ್ಲ” ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಶರಣ್ ಮಾತು

ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್ ಭಾನುವಾರ ಡಿಸ್ಚಾರ್ಜ್ ಆಗಿದ್ದಾರೆ. “ಅವತಾರ ಪುರುಷ” ಸಿನಿಮಾ ಚಿತ್ರೀಕರಣದ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆ ನಟ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆಗೆ ದಾಖಲಾದ ಬಳಿಕ, ಎಕ್ಸ್​ರೇ ಮಾಡಿದ ನಂತರ ಕಿಡ್ನಿ ಸ್ಟೋನ್​ ಆಗಿರೋದು ದೃಢಪಟ್ಟಿದೆ. ಹೀಗಾಗಿ ಡಾಕ್ಟರ್​ ಸಲಹೆಯ ಮೇರೆಗೆ ಒಂದು ದಿನದ ಮಟ್ಟಿಗೆ ಆಸ್ಪತ್ರೆಯಲ್ಲೇ ಆಡ್ಮಿಟ್​ ಆಗಿದ್ದರು. ಇದೀಗ ಡಿಸ್ಚಾರ್ಜ್​ ಆಗಿದ್ದಾರೆ. ಶರಣ್​ ಜೊತೆಯಲ್ಲಿ ಅವರ ಕುಟುಂಬಸ್ಥರು ಆಸ್ಪತ್ರೆಯ ಬಳಿ ಹಾಜರಿದ್ದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶರಣ್, “ನಾನು ಆಸ್ಪತ್ರೆಯಲ್ಲಿದ್ದರೂ ಮನಸ್ಸಿರುವುದು ಸಿನಿಮಾ ಕಡೆ. ನಿನ್ನೆ ತಡೆಯೋಕೆ ಆಗದಷ್ಟು ನೋವು ಕಾಣಿಸಿಕೊಂಡಿತ್ತು. ನನ್ನ ಜೀವನದಲ್ಲಿ ಇಂತಹ ನೋವು ಅನುಭವಿಸಿರಲಿಲ್ಲ. ಶೂಟಿಂಗ್​ಗೆ ಹೋಗಿದ್ದ ಸಮಯದಲ್ಲಿ ನೋವು ಕಾಣಿಸಿಕೊಂಡಿತ್ತು. ಹಿಂದಿನ ಎರಡು ದಿನಗಳ ಕಾಲ ನೋವು ಕಾಣಿಸಿಕೊಂಡಿದ್ದರೂ, ನನಗೆ ಗೊತ್ತಾಗಿರಲಿಲ್ಲ. ಮಸಲ್ ಕ್ಯಾಚ್ ಆಗಿರಬೇಕು ಅಂದುಕೊಂಡಿದ್ದೆ.”

“ಶೂಟಿಂಗ್​ ಸಮಯದಲ್ಲಿ ಈ ಥರ ತುಂಭಾನೇ ಆಗುತ್ತಿರುತ್ತದೆ. ಡ್ಯಾನ್ಸ್, ಫೈಟ್​ ಅಂತ ಬಂದಾಗ ಮಸಲ್​ ಕ್ಯಾಚ್​ ಆಗೋದು ಸಾಮಾನ್ಯ. ಆದ್ರೆ, ಇದು ಸ್ವಲ್ಪ ತೀವ್ರವಾಗಿತ್ತು. ಸದ್ಯ ಈ ನೋವು ಯಾಕೆ ಅನ್ನೋದು ಗೊತ್ತಾಯ್ತು ಅನ್ನೋ ಸಮಾಧಾನ ಇದೆ. ” ಎಂದು ಹೇಳಿದ್ದಾರೆ.

ಆದರೆ ನಿನ್ನೆ ಸೆಟ್ನಲ್ಲಿಯೇ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಅವತಾರ ಪುರುಷ ಚಿತ್ರತಂಡದವರೇ ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದರು, ಎಂದು ಇವತ್ತು ಡಿಸ್ಚಾರ್ಜ್ ಆದ ಬಳಿಕ ನಟ ಶರಣ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top