fbpx
ಸಮಾಚಾರ

ಎಸ್​ಪಿ ಬಾಲಸುಬ್ರಹ್ಮಣ್ಯಂಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಪ್ರಧಾನಿಗೆ ಪತ್ರ ಬರೆದ ಸಿಎಂ

ಭಾರತೀಯ ಸಿನಿಮಾ ಸಂಗೀತ ಲೋಕ ಕಂಡ ಮಹಾನ್‌ ಪ್ರತಿಭೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೆ.25ರಂದು ವಿಧಿವಶರಾದರು. ಸಿನಿಮಾರಂಗಕ್ಕೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ವನ್ನು ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.

 

 

ಅಂತಹಾ ಶ್ರೇಷ್ಠ ಗಾಯಕನ ಜನ್ಮಸ್ಥಳ ಆಂಧ್ರಪ್ರದೇಶವಾಗಿರಿವಿದಿ ನಮ್ಮ ಅದೃಷ್ಟ ಎಂದಿರುವ ಜಗನ್ ಎಸ್‌ಪಿಬಿಅಕಾಲಿಕ ನಿಧನವು ದೇಶಾದ್ಯಂತದ ಲಕ್ಷಾಂತರ ಅಭಿಮಾನಿಗಳಿಗೆ ಮತ್ತು ಅಂತರರಾಷ್ಟ್ರೀಯ ಸಂಗೀತ ಪ್ರೇಮಿಗಳಿಗೂ ಸಾಕಷ್ಟು ಸಂಕಟವನ್ನುಂಟು ಮಾಡಿದೆ ಎಂದು ಹೇಳಿದರು.

ಎಸ್‌ಪಿಬಿ ಅಪಾರ ಜನಪ್ರಿಯತೆ ಮತ್ತು ಜಾಗತಿಕ ಸಂಗೀತ ಕ್ಷೇತ್ರದ ಮೇಲೆ ಅವರ 50 ವರ್ಷಗಳ ಪ್ರಬಾವ ವಿಶ್ವದಾದ್ಯಂತ ಸಂಗೀತ ಅಭಿಮಾನಿಗಳಿಂದ ಗೌರವ, ಆದರಗಳನ್ನು ಪಡೆದಿದ್ದಾರೆ. ಎಸ್‌ಪಿಬಿ ಅವರ ಸಾಧನೆಗಳು ಸಂಗೀತವನ್ನು ಮೀರಿವೆ ಮತ್ತು ಅವರು ಸಂಯೋಜನೆ ಮಾಡಿದ್ದ ಹಾಡುಗಳು ಅವರನ್ನು ಇನ್ನಷ್ಟು ಎತ್ತರಕ್ಕೆ ಒಯ್ದಿವೆ ಎಂದು ಆಂಧ್ರ ಸಿಎಂ ಹೇಳಿದ್ದಾರೆ.

ಸಂಗೀತಾ ಕ್ಷೇತ್ರದಲ್ಲಿನ ಸಾಧನೆಗಾಗಿ ಲತಾ ಮಂಗೇಶ್ವರ್​, ಬುಪೆನ್​ ಹಜಾರಿಕ್​, ಎಂಎಸ್​ ಸುಬ್ಬಲಕ್ಷೀ, ಬಿಸ್ಮಿಲ್ಲಾ ಖಾನ್​, ಭೀಮ್​ ಸೇನ್​ ಜೋಷಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಅದೇ ರೀತಿ ಈ ಎಸ್​ಪಿ ಬಿ ಕೊಡುಗೆ ಗಮನಿಸಿ ಈ ಪ್ರಶಸ್ತಿ ನೀಡಬೇಕು ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ, 200ರಲ್ಲಿ ಪದ್ಮ ಶ್ರೀ, 2011ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಪಡೆದ ಇವರು ಕರ್ನಾಟಕ ರಾಜ್ಯ ಹಾಗೂ ಆಂಧ್ರಪ್ರದೇಶ ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಅವರ ಸಾವಿನ ಬಳಿಕ ಎಸ್​ಪಿ ಬಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಸಂಗೀತ ಕ್ಷೇತ್ರದಲ್ಲಿ ದಿಗ್ಗಜ್ಜರಾಗಿದ್ದ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿ ನೀಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ನಟ ಅರ್ಜುನ್​ ಸರ್ಜಾ ಕೂಡ ಈ ಹಿಂದೆ ಪ್ರತಿಕ್ರಿಯಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top