fbpx
ಸಮಾಚಾರ

ಅನುಶ್ರೀ ರಹಸ್ಯ ಬಿಚ್ಚಿಟ್ಟ ಆಸ್ಕಾ: ಪಾರ್ಟಿಯಲ್ಲಿ ಒಮ್ಮೆ ನಟಿ ಅನುಶ್ರೀಯನ್ನು ನೋಡಿದ್ದೆ

ಸ್ಯಾಂಡಲ್ ವುಡ್ ನಟಿ, ನಿರೂಪಕಿ ಅನುಶ್ರೀ ಅವರನ್ನು ತಾನು ಈ ಹಿಂದೆ ಪಾರ್ಟಿಯೊಂದರಲ್ಲಿ ನೋಡಿದ್ದೆ ಎಂದು ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿರುವ ಆಸ್ಕಾ ಸಿಸಿಬಿ ಅಧಿಕಾರಿಗಳ ಬಾಯಿ ಬಿಟ್ಟಿದ್ದಾಳೆ ಎಂದು ಹೇಳಲಾಗಿದೆ.

ಮಾದಕ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಸಿಸಿಬಿ ವಿಚಾರಣೆ ಎದುರಿಸಿದ್ದ ಸ್ಯಾಂಡಲ್ ವುಡ್ ನಟಿ, ನಿರೂಪಕಿ ಅನುಶ್ರೀಗೆ ಬಂಧಿತ ಆಸ್ಕಾ ಮುಳುವಾಗುವ ಸಾಧ್ಯತೆ ಇದೆ.

ಮಣಿಪುರ ಮೂಲದ ಆಸ್ಕಾ ಡ್ರಗ್ಸ್ ಕೇಸ್​ನಲ್ಲಿ ಮಂಗಳೂರು ಸಿಸಿಬಿ ಪೊಲೀಸರಿಗೆ ರೆಡ್ ಆ್ಯಂಡ್ ಆಗಿ ಸಿಕ್ಕಿಬಿದ್ದಿದ್ದಳು. ಬಾಲಿವುಡ್​ನ ಕೆಲ ಸಿನಿಮಾಗಳಲ್ಲಿ ನಟಿಸಿರುವ ನಟನ ಜೊತೆ ಆಸ್ಕಾಗೆ ನಂಟಿದೆ. ಗೋವಾ ಮುಂಬೈನಲ್ಲಿ ಆತನೊಂದಿಗೆ ಆಸ್ಕಾ ಪಾರ್ಟಿ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಈಗ ಮಂಗಳೂರು ಸಿಸಿಬಿ ತಂಡ ಆತನ ಜಾಡು ಹಿಡಿದು ಮುಂಬೈನಲ್ಲಿ ಆಪರೇಷನ್​ಗೆ ಹೊರಟಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top