fbpx
ಸಮಾಚಾರ

“ಅಜಿತ್​ ಬರದಿದ್ದರೆ ಏನಾಯ್ತು?” ಕಾಲೆಳೆದವರಿಗೆ SBP ಪುತ್ರ ಚರಣ್​ ಪ್ರಶ್ನೆ

ಎಸ್ ಪಿ ಬಾಲಸುಬ್ರಹ್ಮಣ್ಯಂ ಸತತ 52 ದಿನಗಳ ಕಾಲ ಚೆನ್ನೈನ ಎಂ ಜಿ ಎಂ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ಸೆಪ್ಟಂಬರ್ 25ರಂದು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಇಡೀ ಭಾರತೀಯ ಚಿತ್ರರಂಗದ ಎಲ್ಲ ಭಾಷೆಗಳಲ್ಲೂ ಸ್ನೇಹಿತರು, ಅಭಿಮಾನಿಗಳಿದ್ದಾರೆ. ಆದರೂ ಕೂಡ ಅಂತ್ಯಕ್ರಿಯೆಯಲ್ಲಿ ಸ್ಟಾರ್‌ ನಟರು ಯಾರೂ ಕಾಣಿಸಿಕೊಳ್ಳಲಿಲ್ಲ! ಯಾಕೆ ಎಂಬ ಅಚ್ಚರಿಯ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ.

ಚೆನ್ನೈನ ಹೊರವಲಯದ ರೆಡ್‌ ಹಿಲ್ಸ್‌ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಸೆ.26ರಂದು ಎಸ್‌ಪಿಬಿ ಅಂತ್ಯಕ್ರಿಯೆ ನಡೆಯಿತು. ಅದರಲ್ಲಿ ಅಜಿತ್‌ ಕುಮಾರ್‌ ಸೇರಿದಂತೆ ಅನೇಕ ಸ್ಟಾರ್‌ ಹೀರೋಗಳು ಭಾಗಿ ಆಗುತ್ತಾರೆ ಎಂದೇ ನಿರೀಕ್ಷಿಸಲಾಯಿತು. ಆದರೆ ಅವರು ಯಾರೂ ಬರಲಿಲ್ಲ.

ವಿಶೇಷವಾಗಿ ನಟ ಅಜಿತ್ ಯಾಕೆ ಬಂದಿಲ್ಲ, ಎಸ್ ಪಿ ಬಿ ವಿಚಾರದಲ್ಲಿ ನಟ ಅಜಿತ್ ಮೌನಕ್ಕೆ ಶರಣಾಗಿದ್ದೇಕೆ ಎನ್ನುವ ಸುದ್ದಿ ವೈರಲ್ ಆಗಿದೆ. ಅನೇಕರು ಅಜಿತ್ ಗೈರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಷಯವಾಗಿ, ಇದೀಗ ಎಸ್​ಪಿಬಿ ಅವರ ಮಗ ಎಸ್​ಪಿಬಿ ಚರಣ್​ ಪ್ರತಿಕ್ರಿಯಿಸಿದ್ದಾರೆ. ಅಜಿತ್​ ಬರದಿದ್ದರೆ ಏನಾಯ್ತು ಎಂದು ಕಾಲೆಳೆದವರನ್ನು ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ಮಾತನಾಡಿರುವ ಚರಣ್​, ‘ಈ ವಿಷಯವಾಗಿ ನನಗೆ ಯಾವುದೇ ಪ್ರತಿಕ್ರಿಯೆ ನೀಡುವುದಕ್ಕೆ ಇಷ್ಟವಿಲ್ಲ. ಅಜಿತ್​ ನನಗೆ ಒಳ್ಳೆಯ ಸ್ನೇಹಿತರು. ಅಪ್ಪನ ಜತೆಗೂ ಅವರಿಗೆ ಗೆಳೆತನವಿತ್ತು. ಅಜಿತ್​ ಬರದಿದ್ದರೆ ಏನಂತೆ? ಅವರು ಮನೆಯಲ್ಲಿ ಕೂತು ದುಃಖಿಸುತ್ತಿರಬಹುದು. ಅವರು ಖುದ್ದು ಬರಲೇಬೇಕು, ನಮಗೆ ಸಮಾಧಾನ ಹೇಳಬೇಕು ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ’ ಎಂದು ಅವರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top