fbpx
ಸಮಾಚಾರ

35 ಸಾವಿರ ರನ್ಸ್​ಗೆ ಸಿಗಬಹುದು; 45 ಸಾವಿರ ಸಾಂಗ್ಸ್​ಗೆ ಏಕೆ ಸಿಗಬಾರದು?

ಭಾರತೀಯ ಸಿನಿಮಾ ಸಂಗೀತ ಲೋಕ ಕಂಡ ಮಹಾನ್‌ ಪ್ರತಿಭೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೆ.25ರಂದು ವಿಧಿವಶರಾದರು. ಸಿನಿಮಾರಂಗಕ್ಕೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ವನ್ನು ನೀಡಬೇಕೆಂದು ಅವರ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

#bharatratnaforspb ಎಂಬ ಹ್ಯಾಷ್​​ಟ್ಯಾಗ್​ನಲ್ಲಿ ಶನಿವಾರವೇ ಅಭಿಯಾನ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ನೆಟ್ಟಿಗರು ಹಾಗೂ ಎಸ್​ಪಿಬಿ ಅವರ ಅಭಿಮಾನಿಗಳು ಅವರಿಗೆ ಭಾರತ ರತ್ನ ಸಿಗಲೇಬೇಕು ಎಂದು ವಿಧವಿಧವಾಗಿ ಆಗ್ರಹಿಸಿದ್ದಾರೆ.

ಕ್ರಿಕೆಟ್ ನಲ್ಲಿ 35 ಸಾವಿರ ರನ್ನು ಗಳಿಸಿರುವ ಸಚಿನ್ ತೆಂಡೂಲ್ಕರ್ ಗೆ ಭಾರತ ರತ್ನ ಲಭಿಸಿರುವುದನ್ನು ಉಲ್ಲೇಖಿಸಿ “35 ಸಾವಿರ ರನ್​ಗಳಿಗೆ ಭಾರತ ರತ್ನ ಸಿಕ್ಕಿದ್ದರೆ 45 ಸಾವಿರ ಹಾಡುಗಳಿಗೆ ಏಕೆ ಸಿಗಬಾರದು?” ಎನ್ನುವ ಮೂಲಕ ಎಸ್​​ಪಿಬಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿದ್ದಾರೆ.

 

 

ಸಂಗೀತಾ ಕ್ಷೇತ್ರದಲ್ಲಿನ ಸಾಧನೆಗಾಗಿ ಲತಾ ಮಂಗೇಶ್ವರ್​, ಬುಪೆನ್​ ಹಜಾರಿಕ್​, ಎಂಎಸ್​ ಸುಬ್ಬಲಕ್ಷೀ, ಬಿಸ್ಮಿಲ್ಲಾ ಖಾನ್​, ಭೀಮ್​ ಸೇನ್​ ಜೋಷಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಅದೇ ರೀತಿ ಈ ಎಸ್​ಪಿ ಬಿ ಕೊಡುಗೆ ಗಮನಿಸಿ ಈ ಪ್ರಶಸ್ತಿ ನೀಡಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top