fbpx
ಸಮಾಚಾರ

ಕನ್ನಡಿಗ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸುವಂತೆ ಮುಖ್ಯಮಂತ್ರಿ BSYಗೆ ಸಂಸದ ಜಿ.ಸಿ. ಚಂದ್ರಶೇಖರ್ ಒತ್ತಾಯ

ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಮೀಸಲಾತಿ ನೀಡಬೇಕು ಎಂಬ ರಾಜ್ಯ ಸರ್ಕಾರದ ಆದೇಶ ಅನುಷ್ಠಾನಕ್ಕೆ ಹೈಕೋರ್ಟ್‌ ತಡೆ ಹಿಡಿದಿದೆ. ಹೈ ಕೋರ್ಟ್ ನ ಈ ನಡೆಗೆ ಸಂಸದ ಜಿಸಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದು ಈ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ.

ಮುಖ್ಯಮಂತ್ರಿಗಳು ಕೂಡಲೇ ಅಗತ್ಯ ಕಾನೂನು ತಜ್ಞರ ಸಮಿತಿಯನ್ನು ರಚಿಸಿ ಕೂಡಲೇ ಸುಪ್ರೀಂ ಕೋರ್ಟ್ ನಲ್ಲಿ ಈ ವಿಷಯದ ಬಗ್ಗೆ ಶೀಘ್ರ ಇತ್ಯರ್ಥ ಮಾಡಿ ನಮ್ಮ ರಾಜ್ಯದ ವಿದ್ಯಾರ್ಥಿಗಳ ಪರ ನಿಲ್ಲಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

 

 

“ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಐಯು) ಕರ್ನಾಟಕವು ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ೧೬೦ ಸೀಟ್ ಗಳಿದ್ದರು ಕಳೆದ ವರ್ಷ ಕೇವಲ ೮ ಸೀಟ್ ಸ್ಥಳೀಯ ವಿದ್ಯಾರ್ಥಿಗಳಿಗೆ ಸಿಕ್ಕಿದೆ. ಅಂತೆಯೇ, ಐಐಟಿ ಧಾರವಾಡದಲ್ಲಿ, ಕರ್ನಾಟಕದ ೧೨೦ ಸೀಟ್ ಗಳಲ್ಲಿ ಕೇವಲ ೬ ಸ್ಥಳೀಯ ವಿದ್ಯಾರ್ಥಿಗಳಿಗೆ ಸಿಕ್ಕಿದೆ ಹೀಗಿರುವಾಗ ನಾವು ಎಲ್ಲಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ೨೫% ಸೀಟುಗಳನ್ನು ಆಯಾ ರಾಜ್ಯಗಳಿಗೆ ಮೀಸಲಿಡಬೇಕೆಂಬುದು ನ್ಯಾಯಯುತ ಬೇಡಿಕೆಯೇ ಆಗಿದೆ ಇದರಿಂದ ರಾಜ್ಯಗಳ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಲು ಅನುಕೂಲವಾಗುವುದಲ್ಲದೆ, ಮಾನವ ಸಂಪನ್ಮೂಲ ಸುಧಾರಿಸಲು ಅನುಕೂಲ ಆಗುತ್ತದೆ ಎಂದು ಪ್ರತಿಪಾದಿಸಿದ್ದೆ. ಇದಾದ ಬಳಿಕ ಕರ್ನಾಟಕದ ಸ್ಥಳೀಯ ನಿವಾಸಿಗಳಿಗೆ ಮೀಸಲು ನಿಗದಿಪಡಿಸಿ ರಾಜ್ಯ ಸರ್ಕಾರ ಇತ್ತೀಚಿಗೆ ಮಾಡಿದ್ದ ತಿದ್ದುಪಡಿ ಕಾಯ್ದೆ ಅನ್ವಯ ರಾಜ್ಯದಲ್ಲಿ ೧೦ ವರ್ಷಗಳ ಕಾಲ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ೨೫ % ಮೀಸಲಾತಿ ಘೋಷಣೆ ಮಾಡಿತ್ತು ಆದರೆ, ಇದೀಗ ಹೈ ಕೋರ್ಟ್ ಈ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಿರುವುದು ಬೇಸರದ ಸಂಗತಿ.” ಎಂದು ಸಂಸದರು ಬೇಸರ ಹೊರಹಾಕಿದ್ದಾರೆ.

 

 

“ಭಾರತದ ಒಟ್ಟು ೨೩ ರಾಷ್ಟ್ರೀಯ ಕಾನೂನು ಕಾಲೇಜುಗಳಲ್ಲಿ ಬಹುಪಾಲು ಕಾನೂನು ಕಾಲೇಜುಗಳಲ್ಲಿ ಆಯಾ ರಾಜ್ಯದಲ್ಲಿ ನೆಲೆಸಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಾತಿ ಇದೆ ಇದೇನು ಅತಿಶಯೋಕ್ತಿಯಲ್ಲ, ಉದಾಹರಣೆಗೆ ಎನ್‌ಯುಜೆಎಸ್ ಕೋಲ್ಕತಾ ತನ್ನ ಎಲ್‌ಎಲ್‌ಬಿ ಮತ್ತು ಎಲ್‌ಎಲ್‌ಎಂ ಕೋರ್ಸ್ ಗಳಲ್ಲಿ ೩೦% ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಾತಿ ಘೋಷಣೆ ಮಾಡಿದ್ರೆ ಜನವರಿಯಲ್ಲಿ ಎನ್‌ಎಲ್‌ಯು ದೆಹಲಿ, ಬಿಎ, ಎಲ್‌ಎಲ್‌ಬಿ ಮತ್ತು ಎಲ್‌ಎಲ್‌ಎಂ ಕೋರ್ಸ್ ಗಳಲ್ಲಿ ೫೦ ಪ್ರತಿಶತ ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಾತಿ ಘೋಷಣೆ ಮಾಡಿದೆ, ನ್ಯಾಷನಲ್ ಲಾ ಯೂನಿವರ್ಸಿಟಿ ಒಡಿಶಾ (ಎನ್‌ಎಲ್‌ಯುಒ)ದ ಜನರಲ್ ಕೌನ್ಸಿಲ್ ಒರಿಸ್ಸಾದ ಸ್ಥಳೀಯ ಅಭ್ಯರ್ಥಿಗಳ ಅನುಕೂಲಕ್ಕಾಗಿ ೨೫% ಮೀಸಲಾತಿಯನ್ನು ಅನುಮೋದಿಸಿದೆ.” ಎಂದು ಜಿಸಿ ಚಂದ್ರಶೇಖರ್ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

 

 

“ಎನ್‌ಎಎಲ್‌ಎಸ್‌ಎಆರ್ ಹೈದರಾಬಾದ್-೨೦ %, ಎನ್‌ಎಲ್‌ಯು ಭೋಪಾಲ್ ಬಿ.ಎ.ಎಲ್.ಎಲ್.ಬಿ ಯ ೬೫ ಸೀಟ್ ಗಳಲ್ಲಿ ೨೬ ಸೀಟ್ ಗಳನ್ನು ಮಧ್ಯಪ್ರದೇಶ ರಾಜ್ಯ ಸ್ಥಳೀಯ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ, ಪಶ್ಚಿಮ ಬಂಗಾಳ ಓUಎS ನಲ್ಲಿ ಮುಂದಿನ ಶೈಕ್ಷಣಿಕ ವರ್ಷ(೨೦೨೦ -೨೧) ದಿಂದ ೩೦% ಸ್ಥಳೀಯ ಅಭ್ಯರ್ಥಿಗಳಿಗೆ ಕಾಯ್ದಿರಿಸುವ ಮೀಸಲಾತಿ ನಿಯಮವನ್ನು ಅಳವಡಿಸಲಿದೆ ಅಂತ ಸುಪ್ರೀಂ ಕೋಟ್ಹೇð ಹೇಳಿದೆ.”

“ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಜೋಧಪುರದಲ್ಲಿ ರಾಜಸ್ಥಾನ್ ೨೫% ಸೀಟುಗಳನ್ನು, ಹಿದಾಯತುಲ್ಲಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಛತ್ತೀಸ್ಗಡ ೫೦% ಸೀಟುಗಳನ್ನು, ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ೨೫% ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಿರಿಸಿದೆ. ಇನ್ನು ಅನೇಕ ರಾಜ್ಯಗಳು ತಮ್ಮ ರಾಜ್ಯಗಳ ಸ್ಥಳೀಯ ಅಭ್ಯರ್ಥಿಗಳಿಗೆ ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಮೀಸಲಾತಿ ಘೋಷಣೆ ಮಾಡಿವೆ.” ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ರಾಜ್ಯಗಳ ಸಂಪನ್ಮೂಲ, ಭೂಮಿ, ಸವಲತ್ತು, ಸಬ್ಸಿಡರಿ, ಸರ್ಕಾರದ ಪ್ರೋತ್ಸಾಹ ಪಡೆದುಕೊಳ್ಳುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಮೇಲೆ ರಾಜ್ಯಗಳ ನಿಯಂತ್ರಣ ಇಲ್ಲ ಎನ್ನುವುದು ಎಷ್ಟು ಸರಿ? ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಅಗತ್ಯ ಕಾನೂನು ತಜ್ಞರ ಸಮಿತಿಯನ್ನು ರಚಿಸಿ ಕೂಡಲೇ ಸುಪ್ರೀಂ ಕೋರ್ಟ್ ನಲ್ಲಿ ಈ ವಿಷಯದ ಬಗ್ಗೆ ಶೀಘ್ರ ಇತ್ಯರ್ಥ ಮಾಡಿ ನಮ್ಮ ರಾಜ್ಯದ ವಿದ್ಯಾರ್ಥಿಗಳ ಪರ ನಿಲ್ಲಬೇಕೆಂದು ಕೋರುತ್ತೇನೆ.” ಎಂದೂ ಪತ್ರದಲ್ಲಿ ಒತ್ತಾಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top