fbpx
ಸಮಾಚಾರ

ಅಕ್ಷಯ್​​ ಕುಮಾರ್​​ ಮೇಲೆ ರೇಗಾಡಿದ ನಟಿ ರಮ್ಯಾ: ಏನು ಕಾರಣ?

ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಸಾವಿಗೆ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಗಳನ್ನು ನೇಣಿಗೇರಿಸುವಂತೆ ದೇಶದ ಮೂಲೆಮೂಲೆಯಿಂದಲೂ ಕೂಗು ಕೇಳಿ ಬಂದಿದೆ. ಈ ನಡುವೆ ಸಂತ್ರಸ್ತೆಯ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ.

 

 

ಅತ್ಯಾಚಾರಿಗಳನ್ನು ನೇಣಿಗೆ ಹಾಕಿ ಎಂದ ಅಕ್ಷಯ್ ‌ಕುಮಾರ್
‘ಹತ್ರಾಸ್‌ ಗ್ಯಾಂಗ್‌ರೇಪ್ ನೋಡಿ ಕೋಪದ ಜೊತೆಗೆ ಹತಾಶೆ ಕಾಡುತ್ತಿದೆ. ಇದೆಲ್ಲ ಯಾವಾಗ ನಿಲ್ಲುತ್ತದೆ? ನಮ್ಮ ಕಾನೂನು, ಅದನ್ನು ಅನುಷ್ಠಾನಕ್ಕೆ ತರುವುದು ಕಠಿಣ ಆಗಬೇಕು. ಶಿಕ್ಷೆಯನ್ನು ಕಂಡು ಅತ್ಯಾಚಾರಿಗಳು ಭಯ ಬೀಳಬೇಕು. ಅಪರಾಧಿಗಳನ್ನು ನೇಣಿಗೆ ಮಗಳು, ಸಹೋದರಿಯರ ಭದ್ರತೆಗಾಗಿ ದನಿಯೆತ್ತಿ, ಇದನ್ನು ನಾವು ಮಾಡಬಹುದು’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದರು.

 

 

ರಮ್ಯಾ ತಿರುಗೇಟು
ಅಕ್ಷಯ್​ ಕುಮಾರ್ ಅವರು ಮಾಡಿರುವ ಟ್ವೀಟ್​ಗೆ ರಮ್ಯಾ ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇನ್ನು ಮುಂದೆಯೂ ನೀವು ನಿರಾಶರಾಗಿ ಹತಾಶೆಗೊಳ್ಳುವುದು ಮುಂದುವರೆಯುತ್ತಲೇ ಇರುತ್ತದೆ. ಇದಕ್ಕೆ ಕೊನೆಯೇ ಇಲ್ಲ. ದ್ವೇಷಪೂರಿತ ಮನಸ್ಥಿತಿಯೇ ಇಂತಹ ಘಟನೆಗಳು ನಡೆಯಲು ಕಾರಣವಾಗುತ್ತಿವೆ. ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ ಹಾಕುವವರನ್ನೇ ಪ್ರಧಾಣಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಅನುಸರಿಸುತ್ತಿದ್ದಾರೆ. ಬದಲಾವಣೆ ಮೇಲಿನಿಂದ ಆರಂಭವಾಗಬೇಕೆಂದು ನೀವು ಯೋಚಿಸುವುದಿಲ್ಲವೇ ಎಂದು ರಮ್ಯಾ ಅಕ್ಷಯ್​ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top