fbpx
ಸಮಾಚಾರ

ಬಾಲಿಗೆ ಎಂಜಲು ಹಚ್ಚಿ ನಿಯಮ ಉಲ್ಲಂಘನೆ: ಶಿಕ್ಷೆಗೆ ಒಳಗಾಗುತ್ತಾರಾ ಉತ್ತಪ್ಪ? ವೈರಲ್ ವಿಡಿಯೋ

ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಾಬಿನ್ ಉತ್ತಪ್ಪ ಅವರು ಆಚಾನಕ್ ಆಗಿ ಬಾಲಿಗೆ ಎಂಜಲು ಹಚ್ಚಿ ಐಪಿಎಲ್‍ನಲ್ಲಿ ಮೊದಲ ಬಾರಿಗೆ ಕೊರೊನಾ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

ಇಡೀ ವಿಶ್ವದಲ್ಲೇ ಕೊರೊನಾ ಇರುವ ಕಾರಣದಿಂದ ಬಿಸಿಸಿಐ ಕೆಲ ಹೊಸ ಕೊರೊನಾ ನಿಯಮಗಳನ್ನು ರಚಿಸಿಕೊಂಡು ಐಪಿಎಲ್ ಆಡಿಸುತ್ತಿದೆ. ಈ ನಿಯಮಗಳ ಪ್ರಕಾರ ಬಾಲಿಗೆ ಎಂಜಲು ಹಚ್ಚುವುದನ್ನು ನಿಷೇಧ ಮಾಡಿದೆ.

ಕ್ರಿಕೆಟ್‌ನಲ್ಲಿ ಚೆಂಡಿನ ಹೊಳಪು ಉಳಿಸಿಕೊಳ್ಳಲು ಅದಕ್ಕೆ ಎಂಜಲು ಹಚ್ಚುವುದು ಸಾಮಾನ್ಯ. ಆದರೆ ವೈರಸ್ ಹರಡುವ ಅಪಾಯ ಇದ್ದು, ಸುರಕ್ಷತೆಯ ದೃಷ್ಟಿಯಿಂದ ಚೆಂಡಿಗೆ ಎಂಜಲು ಹಚ್ಚುವುದರ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಆದರೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಉತ್ತಪ್ಪ ಕ್ಯಾಚ್ ಕೈಚೆಲ್ಲಿದ ಬಳಿಕ ಚೆಂಡಿಗೆ ಎಂಜಲು ಹಚ್ಚಿರುವುದು ವಿಡಿಯೋದಲ್ಲಿ ದಾಖಲಾಗಿದೆ.

 

 

ಉತ್ತಪ್ಪ ಅವರು ಎಂಜಲು ಬಳಕೆ ಮಾಡಿರುವುದು ಉದ್ದೇಶಪೂರ್ವಕವಾಗಿಯೇ ಅಥವಾ ಮರೆತು ಹಚ್ಚಿದ್ದಾರೆಯೇ ಎನ್ನುವುದು ಗೊತ್ತಾಗಿಲ್ಲ. ಈ ಬಗ್ಗೆ ಅಂಪೈರ್ ಹಾಗೂ ರೆಫ್ರಿ ಗಂಭೀರವಾಗಿ ಪರಿಗಣಿಸಿದರೆ ಉತ್ತಪ್ಪ ಅವರಿಗೆ ಸಂಕಷ್ಟ ಎದುರಾಗಬಹುದು.

ಐದು ರನ್ ನಿಯಮ:
ಒಂದು ವೇಳೆ ಬಾಲಿಗೆ ಯಾವುದೇ ಆಟಗಾರ ಎಂಜಲು ಹಚ್ಚಿದರೆ ಎರಡು ಬಾರಿ ಎಚ್ಚರಿಕೆ ನೀಡುತ್ತಾರೆ. ಇದನ್ನೂ ಮೀರಿ ಮೂರನೇ ಬಾರಿ ತಪ್ಪು ಮಾಡಿದರೆ ಎದರುರಾಳಿ ತಂಡಕ್ಕೆ ಬೌಲಿಂಗ್ ಮಾಡುತ್ತಿದ್ದ ತಂಡ ಐದು ರನ್‍ಗಳನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಐಸಿಸಿ ನಿಯಮ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top