fbpx
ಸಮಾಚಾರ

“ನನ್ನ ನೆಮ್ಮದಿ ಹಾಳಾಗಿದೆ” ಗಳಗಳನೆ ಕಣ್ಣೀರು ಹಾಕಿದ ಅನುಶ್ರೀ

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ವಿಚಾರವಾಗಿ ಸಿಸಿಬಿ ವಿಚಾರಣೆ ಎದುರಿಸಿರೋ ನಿರೂಪಕಿ ಅನುಶ್ರೀ ತಮ್ಮ ಮನದಾಳದ ನೋವನ್ನು ಫೇಸ್​ಬುಕ್ ಮುಖಾಂತರ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಕಣ್ಣೀರು ಸುರಿಸುತ್ತ ನಾನು ಯಾವುದೇ ತಪ್ಪು ಮಾಡಿಲ್ಲ ಅಂತ ನೊಂದುಕೊಂಡಿದ್ದಾರೆ.

ಈ ಸಂಬಂಧ ವೀಡಿಯೋ ಮಾಡಿರುವ ಅವರು, ಈ ವೀಡಿಯೋವನ್ನು ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ಕರುಣೆಗೋಸ್ಕರ ಮಾಡುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಸುತ್ತಮುತ್ತ ಹೇಳುತ್ತಿದ್ದಾರೆ. ಈ ಅಭಿಪ್ರಾಯಗಳು ನನ್ನ ಬಗ್ಗೆ ಇರುವುದರಿಂದ ಈ ವೀಡಿಯೋ ಮಾಡುತ್ತಿದ್ದೇನೆ ಎಂದು ಹೇಳಿ ಗಳಗಳನೇ ಕಣ್ಣೀರಿಟ್ಟಿದ್ದಾರೆ.

 

 

View this post on Instagram

 

ನಿಮ್ಮ ನಂಬಿಕೆ ನನಗೆ ಶಕ್ತಿ

A post shared by ಅನುಶ್ರೀ Anchor Anushree (@anchor_anushreeofficial) on


ನನ್ನನ್ನು ಅಪರಾಧಿಯಾಗಿ ಬಿಂಬಿಸಿದ್ದು ತುಂಬಾ ನೋವು ತಂದಿದೆ. ಒಂದು ವಾರದಿಂದ ಮನೆಯವರ ನೆಮ್ಮದಿ ಹಾಳಾಗಿದೆ. ಈ ಕಷ್ಟ ಕಾಲದಲ್ಲಿ ಜನರು ಜೊತೆ ನಿಂತಿದ್ದಾರೆ ಎಂದು ಫೇಸ್​ಬುಕ್ ವಿಡಿಯೋದಲ್ಲಿ ಆ್ಯಂಕರ್ ಅನುಶ್ರೀ ಕಣ್ಣೀರಿಟ್ಟಿದ್ದಾರೆ.

ಸುತ್ತಮುತ್ತ ಕೆಲವೊಂದಷ್ಟು ಅಭಿಪ್ರಾಯಗಳು, ವಿಚಾರಗಳು, ಅಂತೆಕಂತೆಗಳು ಇದು ನಮ್ಮ ನೆಮ್ಮದಿನ ತುಂಬಾನೇ ಹಾಳು ಮಾಡುತ್ತಿದೆ. ದಯಮಾಡಿ ಇಂತಹ ವಿಚಾರಗಳನ್ನು ಹರಿದಾಡಿಸುವ ಮುನ್ನ ಒಂದು ಬಾರಿ ನಮ್ಮ ಮನಸ್ಥಿತಿ ಬಗ್ಗೆ ಯೋಚನೆ ಮಾಡಿ. ನಾನಿಷ್ಟೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top