fbpx
ಸಮಾಚಾರ

ಕ್ರಿಕೆಟಿಗ​ ಶಮಿ ಪತ್ನಿ ಹಸಿನ್​ ಜಹಾನ್​ಗೆ ರಕ್ಷಣೆ ನೀಡಿವಂತೆ ಪೊಲೀಸರಿಗೆ ಹೈಕೋರ್ಟ್​ ಸೂಚನೆ

ಕ್ರಿಕೆಟಿಗ ಮೊಹಮದ್ ಶಮಿ ಅವರ ಪತ್ನಿ ಹಾಗೂ ರೂಪದರ್ಶಿ ಹಸಿನ್ ಜಹಾನ್ ಅವರಿಗೆ ಮತ್ತು ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಪಶ್ಚಿಮ ಬಂಗಾಳದ ಪೊಲೀಸರಿಗೆ ಕಲ್ಕತ ಹೈಕೋರ್ಟ್ ಸೂಚನೆ ನೀಡಿದೆ.

ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ್ದ ಕುರಿತಾಗಿ ಹಸಿನ್​ ಜಹಾನ್​ ಪೋಸ್ಟ್ ಹಾಕಿದ್ದರು. ಅವರು ರಾಮಮಂದಿರದ ಬಗ್ಗೆ ಪೋಸ್ಟ್ ಹಾಕಿದ ಬೆನ್ನಲ್ಲೇ ಅವರಿಗೆ ಕೊಲೆ ಹಾಗೂ ರೇಪ್​ ಬೆದರಿಕೆಗಳು ಬಂದಿದ್ದವು. ಅವರು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿರಿಲ್ಲ. ಹೀಗಾಗಿ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ಹಸಿನ್​ ಅರ್ಜಿಯ ವಿಚಾರಣೆ ನಡೆಸಿದ ಪಶ್ವಿಮ ಬಂಗಾಳ ಹೈಕೋರ್ಟ್​ ಅವರಿಗೆ ಭದ್ರತೆ ನೀಡುವಂತೆ ರಾಜ್ಯ ಪೊಲೀಸ್ ಇಲಾಖೆಗೆ ಸೂಚಿಸಿದೆ.

ನನ್ನ ದೂರಿನ ಬಳಿಕವೂ ಪೊಲೀಸರು ಯಾವುದೇ ಕ್ರಮ ಕೈ ಗೊಂಡಿಲ್ಲ. ಮಾನವೀಯತೆಯ ಆಧಾರದ ಮೇಲಾದರೂ ಅವರು ಸೂಕ್ತ ಕ್ರಮ ಜರುಗಿಸಬೇಕುತ್ತು. ಆದರೆ ಯಾವುದೇ ಸಕರಾತ್ಮಕ ಬೆಳವಣಿಗೆ ಕಂಡು ಬರದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಹಸಿನ್ ಜಹಾನ್ ತಿಳಿಸಿದ್ದರು.

ಮೊಹಮ್ಮದ್ ಶಮಿ 2014 ರಲ್ಲಿ ಹಸಿನ್ ಜಹಾನ್ ಅವರನ್ನು ಮದುವೆಯಾಗಿದ್ದರು. ನಾಲ್ಕು ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದ ಈ ಜೋಡಿ ಕೆಲ ವರ್ಷಗಳ ಹಿಂದೆ ದೂರವಾಗಿದ್ದರು. ಇದೇ ವೇಳೆ ಪತಿಯ ವಿರುದ್ಧ ಹಸಿನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top