fbpx
ಸಮಾಚಾರ

ರಾತ್ರೋರಾತ್ರಿ ಶ್ರೀಮಂತಳಾದ ಬಡ ಅಜ್ಜಿ: ಅಜ್ಜಿಯ ಅದೃಷ್ಟ ಬದಲಿಸಿದ ಸತ್ತ ಮೀನು

ಬಡ ವೃದ್ಧೆಯೊಬ್ಬಳು ಹಿಡಿದ ಸತ್ತ ದೈತ್ಯ ಮೀನೊಂದ ಆಕೆಯ ಅದೃಷ್ಟವನ್ನೇ ಬದಲಾಯಿಸಿದೆ. ರಾತ್ರೋ ರಾತ್ರಿ ಆ ಮಹಿಳೆ ಲಕ್ಷಾಧಿಪತಿಯಾಗಿದ್ದಾಳೆ. ಅದು ಹೇಗೆ ಸಾಧ್ಯ? ಸತ್ತ ಮೀನು ಆಕೆಯ ಅದೃಷ್ಟ ಬದಲಾಯಿಸಿದ್ದು ಹೇಗೆ ಅಂತೀರಾ? ಮುಂದೆ ಓದಿ

ಪಶ್ಚಿಮಬಂಗಾಳದ ಸಾಗರ್ ದ್ವೀಪ ಪ್ರದೇಶದ ಚಾಕ್ ಫುಲ್ ದುಬಿ ಗ್ರಾಮದ ನಿವಾಸಿ ಪುಪ್ಪಾ ಕಾರ್ ಎಂಬ ಮಹಿಳೆ ನದಿಯಲ್ಲಿ ತೇಲುತ್ತಾ ಬಂದಿದ್ದ 52 ಕೆಜಿ ತೂಕದ ಭಾರೀ ಗಾತ್ರದ ಮೀನನ್ನು ಹಿಡಿದು, ಬಹಳ ಶ್ರಮಪಟ್ಟು ದಡಕ್ಕೆ ತಂದಿದ್ದರು.

ಪುಪ್ಪ ಕಾರ್ ಎಂಬ ಮಹಿಳೆ ಈ ಭಾರೀ ಗಾತ್ರದ ಮೀನನ್ನು ಸ್ಥಳೀಯರ ನೆರವಿನಿಂದ ಮೀನು ಮಾರುಕಟ್ಟೆಗೆ ಮಾರಾಟ ಮಾಡಿದ್ದರು. ಅಲ್ಲಿ ಪ್ರತಿ ಕಿಲೋಗೆ 6,200 ರೂಪಾಯಿಯಂತೆ ಬರೋಬ್ಬರಿ 3 ಲಕ್ಷ ರೂಪಾಯಿ ಹಣ ಪಡೆಯುವ ಮೂಲಕ ಮಹಿಳೆಯ ಅದೃಷ್ಟ ಖುಲಾಯಿಸಿರುವುದಾಗಿ ವರದಿ ತಿಳಿಸಿದೆ.

ಅಂದಹಾಗೆ ಆ ದೈತ್ಯ ಮೀನು ಬಹುಶಃ ಹಾದುಹೋಗುವ ಹಡಗಿಗೆ ಡಿಕ್ಕಿ ಹೊಡೆದು ಸತ್ತು ಹೋಗಿರಬಹುದು. ಒಂದು ವೇಳೆ ಮೀನು ಕೊಳೆಯಲು ಪ್ರಾರಂಭಿಸದಿದ್ದರೆ ಇನ್ನೂ ಹೆಚ್ಚಿನ ಹಣ ಪಡೆಯಬಹುದಿತ್ತು ಎಂದು ಸ್ಥಳೀಯ ಮೀನು ವ್ಯಾಪಾರಿಗಳು ಹೇಳಿದ್ದಾರೆ.

“ಮೀನು ನನಗೆ ಜಾಕ್‍ಪಾಟ್ ಆಗಿ ಪರಿಣಮಿಸಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 6,200 ರೂ.ಗೆ ಮಾರಾಟ ಮಾಡುವ ಮೂಲಕ ನಾನು 3 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಇಂತಹ ದೈತ್ಯ ಮೀನನ್ನು ನಾನು ನೋಡಿಲ್ಲ. ಇದನ್ನು ಬಂಗಾಳಿ ಭಾಷೆಯಲ್ಲಿ ‘ಭೋಲಾ’ ಮೀನು ಎಂದು ಕರೆಯಲಾಗುತ್ತದೆ” ಎಂದು ಅಜ್ಜಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top