fbpx
ಸಮಾಚಾರ

ಸಿಎಂ ಬಿಎಸ್‍ವೈಗೆ ಟಾಂಗ್ ಕೊಟ್ಟ ಸಚಿವ ಸಿಟಿ ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಚಿವ ಸಿಟಿ ರವಿ ಅವರಿಗೆ ಪ್ರಮೋಷನ್ ಲಭಿಸಿದ್ದು, ಈ ನಡುವೆಯೇ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಸಚಿವರು ತಮ್ಮ ವರಸೆ ಬದಲಿಸಿದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ ಅವರು,”ನಮ್ಮಲ್ಲಿ ಒಬ್ಬರಿಗೆ ಒಂದು ಸ್ಥಾನ ಎಂಬ ಅಲಿಖಿತ ನಿಯಮವಿದೆ. ಇದೇ ರೀತಿ 75 ವರ್ಷ ದಾಟಿದವರು ಅಧಿಕಾರ, ರಾಜಕೀಯದಿಂದ ನಿವೃತ್ತಿ ಹೊಂದಬೇಕೆಂಬ ನಿಯಮವೂ ಇದೆ. ಆದರೆ ಕೆಲವೊಮ್ಮೆ ವರಿಷ್ಠರೇ ಅಲಿಖಿತ ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ” ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಿಟಿ ರವಿ ಟಾಂಗ್ ನೀಡಿದರು.

ಅಲಿಖಿತ ನಿಯಮಗಳನ್ನು ಬದಲಾಯಿಸಿದ್ದು, ಪಕ್ಷದ ವರಿಷ್ಠ ಮಂಡಳಿಯ ನಿರ್ಧಾರ. ಆದರೆ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಹಾಗೂ ವ್ಯಕ್ತಿಗತ ಆಯ್ಕೆಯಂತೆ ನನಗೆ ಸಂಘಟನೆಯೇ ಮುಖ್ಯ ಎಂದು ಸಿಟಿ ರವಿ ಸ್ಪಷ್ಟಪಡಿಸಿದರು.

ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಮಾತನಾಡಿದ್ದ ಸಿಟಿ ರವಿ, ಪಕ್ಷವೋ, ಸರ್ಕಾರವೋ ಎಂದು ಕೇಳಿದಾಗ ನಾನು ಪಕ್ಷಕ್ಕೆ ಪ್ರಾಮುಖ್ಯತೆ ನೀಡುತ್ತೇನೆ. ರಾಷ್ಟ್ರೀಯ ರಾಜಕಾರಣಕ್ಕೆ ತೆರಳಿದರೂ ನಮ್ಮ ಬೇರುಗಳು ಇಲ್ಲೇ ಇದೆ. ಪಕ್ಷದ ವರಿಷ್ಠರು ಯಾವಾಗ ರಾಜೀನಾಮೆಗೆ ಸೂಚಿಸುತ್ತಾರೋ ಅಂದೇ ರಾಜೀನಾಮೆ ನೀಡುತ್ತೇನೆ ಎಂದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top