fbpx
ಸಮಾಚಾರ

“ನನ್ನ ಮಗನ ಫೋಟೋ ಹಾಕ್ಕೊಂಡ್ರೆ ಬೆಂಕಿ ಹಚ್ಚಿಸ್ತೀನಿ” ಸೊಸೆ ವಿರುದ್ಧವೇ ರವಿ ತಾಯಿ ಆಕ್ರೋಶ

ಆರ್‌ಆರ್‌ನಗರ ಉಪಾಚುನಾವಣೆಯಲ್ಲಿ ಡಿಕೆ ರವಿ ಪತ್ನಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ಲಾನ್ ಮಾಡಿಕೊಂಡಿವೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸೊಸೆ ವಿರುದ್ಧ ರವಿ ತಾಯಿ ಗೌರಮ್ಮ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ರವಿ ತಾಯಿ ಗೌರಮ್ಮ, ಆಕೆ ಚುನಾವಣೆಗೆ ನಿಂತುಕೊಂಡರೂ ನನ್ನ ಮಗನ ಹೆಸರು, ಫೋಟೋ ಹಾಕಬಾರದು. ಒಂದು ವೇಳೆ ಹೆಸರು, ಫೋಟೋ ಹಾಕಿಕೊಂಡರೆ ನಾನೇ ಹುಡುಗರನ್ನು ಕರೆದುಕೊಂಡು ಹೋಗಿ ಬೆಂಕಿ ಹಚ್ಚಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ನಿನ್ನೆ ಸ್ವಗ್ರಾಮ ಕುಣಿಗಲ್​ನ ದೊಡ್ಡಕೊಪ್ಪಲಿನಲ್ಲಿ ಮಾತನಾಡಿದ ಗೌರಮ್ಮ, ‘ನನ್ನ ಮಗನ ಹೇಸರೇಳಿಕೊಂಡು ಯಾಕೆ‌ ಚುನಾವಣೆಗೆ ನಿಂತ್ಕೋಬೇಕು? ಡಿ.ಕೆ. ರವಿ ಹೆಂಡ್ತಿ ಅನ್ನೋ‌ ಯೋಗ್ಯತೆಯನ್ನು 6 ವರ್ಷದಲ್ಲೇ ಕಳೆದುಕೊಂಡ್ಲು. ನನ್ನ ಮಗನನ್ನು ಅವತ್ತು ಮಣ್ಣಲ್ಲಿ‌ ಬಿಸಾಕಿ‌ ಹೋದವಳು ಇವತ್ತಿನವರೆಗೂ ಬಂದಿಲ್ಲ. ನನ್ನ ಮಗನ ಜೊತೆ ಅವಳೂ ಹೋಗಿ ಬಿಟ್ಲು ಅಂತ ತಿಳಿದುಕೊಂಡಿದ್ದೇನೆ ಎಂದು ಆಕ್ರೋಶ ಹೊರಹಾಕಿದರು.

ನನ್ನ ಮಗನ‌ ದುಡ್ಡಲ್ಲಿ ಒಂದು ರೂಪಾಯಿ‌ಯನ್ನೂ ನಮ್ಮ ಕಷ್ಟಕ್ಕೆ ಅವಳು ಕೊಡಲಿಲ್ಲ. ಚುನಾವಣೆಯಲ್ಲಿ ಅವರು ಏನಾದ್ರೂ ಮಾಡಿಕೊಳ್ಳಲಿ. ಆದ್ರೆ ನನ್ನ‌ ಮಗನ ಹೆಸರು ಮತ್ತು ಫೋಟೋ ಹಾಕಿಕೊಂಡು ಚುನಾವಣೆಗೆ ನಿಲ್ಲಬಾರದು. ಅಪ್ಪಿತಪ್ಪಿ ನನ್ನ ಮಗನ ಫೋಟೋ ಬಳಸಿಕೊಂಡರೆ ಹುಡುಗರನ್ನು ಕರೆದುಕೊಂಡು ನಾನೇ ಹೋಗಿ ಬೆಂಕಿ‌ ಹಚ್ಚಿಸ್ತೀನಿ ಎಂದು ಗೌರಮ್ಮ ಎಚ್ಚರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top