fbpx
ಸಮಾಚಾರ

“ಬಂಧನ ಭೀತಿಯಲ್ಲಿ ತನಗೆ ಕರೊನಾ ಇದೆಯೆಂದು ಅನುಶ್ರೀ ಡ್ರಾಮ ಮಾಡ್ತಾರೆ”

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ನಿರೂಪಕಿ ಅನುಶ್ರೀ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ಸಂಜನಾ ಮೇಲೆ ಆರೋಪಗಳ ಸುರಿಮಳೆ ಮಾಡಿದ್ದ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅನುಶ್ರೀ ವಿಚಾರದಲ್ಲಿ ಕೂಡ ಸರಣಿ ಆರೋಪಗಳನ್ನೂ ಮಾಡುತ್ತಿದ್ದಾರೆ.

ಡ್ರಗ್ಸ್​ ಕೇಸ್​ನಲ್ಲಿ ಅನುಶ್ರೀ ಶೀಘ್ರವೇ ಅರೆಸ್ಟ್ ಆಗ್ತಾರೆ ಎಂದು ನೆನ್ನೆಯಷ್ಟೇ ಸರಣಿ ಟ್ವೀಟ್​ ಮೂಲಕ ಬಾಂಬ್​ ಸಿಡಿಸಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ, ಇದೀಗ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

 

 

‘ಕರೊನಾ ಇದೆ, ಹತ್ತಿರ ಬರಬೇಡಿ. ಇದು ಇವತ್ತು ಪ್ರದರ್ಶನ ಆಗಲಿರೋ ಹೊಸ ಡ್ರಾಮ. ಪೊಲೀಸರು ಅರೆಸ್ಟ್ ಮಾಡ್ತಾರೆ ಅಂತ ಗೊತ್ತಾದ ತಕ್ಷಣಕ್ಕೆ ಶುರು ಆಗುತ್ತೆ ಈ ಕಥೆ. ನಾಟಕದ ರಾಣಿಯ ಹೊಸ ಅವತಾರ ಇಂದು’ ಎಂದು ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಅನುಶ್ರೀ ಬಗ್ಗೆ ಪ್ರಶಾಂತ್ ಸಂಬರಗಿ ವ್ಯಂಗ್ಯವಾಡಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top