fbpx
ಸಮಾಚಾರ

ಈವರೆಗೆ ಅನುಶ್ರೀ ಅರೆಸ್ಟ್​ ಆಗದಂತೆ ‘ಶುಗರ್ ಡ್ಯಾಡಿ’ ತಡೆದಿದ್ದಾನೇ, ಆದರೆ ಇನ್ಮುಂದೆ ಆಗಲ್ಲ: ಸಂಬರಗಿ ಹೊಸ ಬಾಂಬ್

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ನಿರೂಪಕಿ ಅನುಶ್ರೀ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ಸಂಜನಾ ಮೇಲೆ ಆರೋಪಗಳ ಸುರಿಮಳೆ ಮಾಡಿದ್ದ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅನುಶ್ರೆಈ ವಿಚಾರದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ನಟಿ ಹಾಗೂ ನಿರೂಪಕಿ ಅನುಶ್ರೀ ಬಂಧನವಾಗದಂತೆ ಆಕೆಯ ರಕ್ಷಣೆಗೆ ಷುಗರ್ ಡ್ಯಾಡಿಯೊಬ್ಬರು ನಿಂತಿದ್ದಾರೆ ಎಂದು ವಕೀಲ ಪ್ರಶಾಂತ್ ಸಂಬರಗಿ ಟ್ವೀಟ್ ಮಾಡಿದ್ದಾರೆ.

 

 

‘ಅನುಶ್ರೀ ಈವರೆಗೂ ಅರೆಸ್ಟ್‌ ಆಗದಂತೆ ಆಕೆಯ ಶುಗರ್‌ ಡ್ಯಾಡಿ ತಡೆದಿದ್ದಾರೆ. ಆದರೆ ಇನ್ನುಂದೆ ಸಾಧ್ಯವಿಲ್ಲ. ಅನುಶ್ರೀಗೆ ಸಂಬಂಧಿಸಿದ ಇನ್ನೂ ಅನೇಕ ರಹಸ್ಯಗಳು ಹೊರಬರಲಿವೆ’ ಎಂದು ಸಂಬರಗಿ ಬರೆದುಕೊಂಡಿದ್ದಾರೆ. ಹಾಗಾದರೆ ಅವರು ಪ್ರಸ್ತಾಪಿಸಿರುವ ಶುಗರ್‌ ಡ್ಯಾಡಿ ಯಾರು ಎಂಬ ಪ್ರಶ್ನೆ ಈಗ ಎದುರಾಗಿದೆ.

ಹಣ ಮತ್ತು ಐಷಾರಾಮಿ ಉಡುಗೊರೆಗಳನ್ನು ನೀಡುವ ಮೂಲಕ ಯುವತಿಯರನ್ನು ತನ್ನತ್ತ ಸೆಳೆದುಕೊಳ್ಳುವ ಹಿರಿಯ ವ್ಯಕ್ತಿಗೆ ‘ಶುಗರ್‌ ಡ್ಯಾಡಿ’ ಎನ್ನಲಾಗುತ್ತದೆ. ಅನುಶ್ರೀ ಹಿಂದೆಯೂ ಅಂಥ ಒಬ್ಬ ವ್ಯಕ್ತಿ ಇದ್ದಾರೆ ಎಂದು ಪ್ರಶಾಂತ್‌ ಸಂಬರಗಿ ಆರೋಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top