fbpx
ಸಮಾಚಾರ

“ಸುಶಾಂತ್​ರದ್ದು ಆತ್ಮಹತ್ಯೆನೋ? ಕೊಲೆನೋ?” ಮಾಧ್ಯಮಗಳ ಕಾಲ್ಪನಿಕ ವರದಿಗಳಿಗೆ ತೆರೆ ಎಳೆದ ಏಮ್ಸ್ ವರದಿ

ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಕುರಿತು ಅಂತಿಮ ವರದಿಯನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಸಲ್ಲಿಸಿದ್ದು, ಮಹತ್ವದ ಸಂಗತಿಯೊಂದನ್ನು ತಿಳಿಸಿದೆ.

ಏಮ್ಸ್​ ವೈದ್ಯ ಡಾ. ಸುಧೀರ್​ ಗುಪ್ತಾ ಅವರು ಸುಶಾಂತ್​​ರನ್ನು ಯಾರೂ ಹತ್ಯೆ ಮಾಡಿಲ್ಲ. ಅವರದ್ದು ಆತ್ಮಹತ್ಯೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸುಶಾಂತ್​ ಸಿಂಗ್​ ಅವರ ಒಳ ಅಂಗಗಳ ಪೋಸ್ಟ್​ ಮಾರ್ಟಮ್​​ ರಿಪೋರ್ಟ್​ನಿಂದ ಅವರದ್ದು ಆತ್ಮಹತ್ಯೆ ಎಂಬುದು ಸಾಬೀತಾಗಿದೆ. ಕೊಲೆ ಅಲ್ಲ, ಆತ್ಮಹತ್ಯೆ ಎಂದು ಮಾಹಿತಿ ನೀಡಿದ್ದಾರೆ.

ಏಮ್ಸ್ ವೈದ್ಯರ ತಂಡ ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ಮತ್ತು ವಿಸೆರಾ ವರದಿಗಳನ್ನು ಆಧರಿಸಿ, ಅವರ ಬಳಿ ಲಭ್ಯ ವಿರುವ ಶೇ.20ರಷ್ಟು ವಿಸೆರಾ ಮಾದರಿಯನ್ನು ಆಧರಿಸಿ ಸುಶಾಂತ್‌ ಸಿಂಗ್‌ ಮರಣದ ಬಗ್ಗೆ ಮರು ಮೌಲ್ಯಮಾಪನ ಮಾಡಿತ್ತು. ವಿಧಿವಿಜ್ಞಾನ ಸಂಸ್ಥೆಗಳು ಒಂದು ಲ್ಯಾಪ್ ಟಾಪ್, ಎರಡು ಹಾರ್ಡ್ ಡಿಸ್ಕ್ ಗಳು, ಒಂದು ಕ್ಯಾನನ್ ಕ್ಯಾಮೆರಾ ಮತ್ತು ಎರಡು ಮೊಬೈಲ್ ಫೋನ್ ಗಳನ್ನು ಪರೀಕ್ಷಿಸಿವೆ ಎನ್ನಲಾಗಿದೆ.

ಏಮ್ಸ್ ವರದಿಯಂತೆ ಸುಶಾಂತ್ ಸಿಂಗ್ ಸಾವು ಕೊಲೆಯಲ್ಲ ಎಂದು ತಿಳಿದು ಬಂದಿದೆ. ಆದರೆ, ಸಿಬಿಐ ಅಧಿಕಾರಿಗಳು ಇನ್ನೂ ತನಿಖೆ ಮುಗಿಸಿಲ್ಲ. ಏಮ್ಸ್ ವರದಿ ಬಗ್ಗೆ ಸಹ ಸಿಬಿಐ ಮಾಹಿತಿ ನೀಡಿಲ್ಲ. ಸಿಬಿಐ ವರದಿ ಮೇಲೆ ಹೆಚ್ಚಿನ ಕುತೂಹಲವಿದ್ದು, ಬೇರೆ ಏನಾದರೂ ವಿಷಯಗಳು ಬೆಳಕಿಗೆ ಬರಬಹುದಾ ಎಂದು ನಿರೀಕ್ಷಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top