fbpx
ಸಮಾಚಾರ

ಅತ್ತಿಗೆಯ ಸೀಮಂತ ಶಾಸ್ತ್ರದ ಬೆನ್ನಲ್ಲೇ ಅಭಿಮಾನಿಗಳಲ್ಲಿ ಧ್ರುವ ಸರ್ಜಾ ವಿಶೇಷ ಮನವಿ

ನೆನ್ನೆ ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಈ ಮದ್ಯೆ ನಟ ದೃವಸರ್ಜಾ ಅಭಿಮಾನಿಗಳಲ್ಲಿ ಧ್ರುವ ಮನವಿ ಮಾಡಿಕೊಂಡಿದ್ದಾರೆ.

 

 

ಅಕ್ಟೋಬರ್ 6 ರಂದು ಅಂದರೆ ನಾಳೆ ಧ್ರುವ ಸರ್ಜಾರ ಹುಟ್ಟುಹಬ್ಬ ಇದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಇಂದು ರಾತ್ರಿಯೇ ಮನೆಯ ಬಳಿ ಶುಭಾಶಯ ಕೋರಲು ಬರುತ್ತಾರೆ ಎಂದು ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನವೇ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಧ್ರುವ ಸರ್ಜಾ, “ಅಭಿಮಾನಿಗಳೇ ನಮ್ಮ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನ ವರ್ಣನಾತೀತ. ಈ ವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ, ಎಲ್ಲೂ ಸಂಭ್ರಮವಿಲ್ಲ. ಆದರೆ ಅಭಿಮಾನಿಗಳನ್ನು ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ. ಜೈ ಆಂಜನೇಯ” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top