fbpx
ಸಮಾಚಾರ

“BSY ಮುಖದಲ್ಲಿ ಸಾತ್ವಿಕ ಸಿಟ್ಟು ಕಾಣುತ್ತದೆ, ಆದರೆ ಅಳುಮುಂಜಿ ಥರಾ ಅಳಲ್ಲ.” HDKಗೆ ಸಿಂಹ ಟಾಂಗ್

ಶಿರಾ ಜನರು ನನಗೆ ಹಾಲು ಕೊಡ್ತಿರೋ ಅಥವಾ ವಿಷ ಕೊಡ್ತಿರೋ ಅನ್ನೋ ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹಾಲು ಕೊಡಬೇಡಿ.. ವಿಷ ನೀಡಬೇಡಿ.. ಕೊರೊನಾ ಸಮಯವಾಗಿರುವುದರಿಂದ ಕಷಾಯ ಕೊಟ್ಟು ಕಳುಹಿಸಿ ಎಂದು ಸಂಸದ ಪ್ರತಾಪ್‌ ಸಿಂಹ ವ್ಯಂಗ್ಯವಾಡಿದ್ದಾರೆ.

ಸಿರಾ ತಾಲೂಕು ಚಿಕ್ಕನಹಳ್ಳಿ ಬಿಜೆಪಿ ಬೂತ್ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ರಾಜ್ಯಾದ್ಯಂತ ಕೆರೆ ಕಟ್ಟೆಗಳಲ್ಲಿ ನೀರು. ಆದರೆ, ಬೇರೆಯವರು ರಾಜ್ಯದ ಸಿಎಂ ಆದರೆ ಬರೀ ಕಣ್ಣಿರು ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್‌ ನೀಡಿದರು.

ಯಡಿಯೂರಪ್ಪನವರಿಗೆ 78 ವರ್ಷ. ಅವರ ಮುಖದಲ್ಲಿ ಸಾತ್ವಿಕ ಸಿಟ್ಟು ಕಾಣುತ್ತೆ. ಯಡಿಯೂರಪ್ಪನವರು ಯಾವತ್ತೂ ಅಳುಮುಂಜಿ ಥರ ಅಳಲ್ಲ. ಕುಮಾರಣ್ಣ ಇದ್ರೆ ಸಭೆ ಸಮಾರಂಭದಲ್ಲಿ ಅಪ್ಪ ಮಕ್ಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲಾ ಸಾಲಾಗಿ ಬಂದು ಅಳೋರು ಅಂತಾ ಕುಮಾರಸ್ವಾಮಿಗೆ ಪ್ರತಾಪ್​ ಸಿಂಹ ಲೇವಡಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top