fbpx
ಸಮಾಚಾರ

ಚಾಲೆಂಜ್ ಹಾಕಿದ ಯುವಿಗೆ ವಿನಮ್ರ ಉತ್ತರದ ಮೂಲಕ ಮನಗೆದ್ದ RCB ಸ್ಟಾರ್ ದೇವದತ್ ಪಡಿಕ್ಕಲ್

2020ನೇ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬ್ಯಾಟ್ ಬೀಸುತ್ತಿರುವ 20ರ ಹರೆಯದ ದೇವದತ್ ಪಡಿಕ್ಕಲ್ ಮಿಂಚು ಹರಿಸುತ್ತಿದ್ದಾರೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧಶತಕ ಸಿಡಿಸಿ ಮಿಂಚಿರುವ ದೇವದತ್ ಪಡಿಕ್ಕಲ್ ಆಟದ ಬಗ್ಗೆ ಕ್ರಿಕೆಟ್ ಪಂಡಿತರು ಹಾಡಿಹೊಗಳುತ್ತಿದ್ದಾರೆ.

 

 

ಕೊಹ್ಲಿ ಮತ್ತು ಪಡಿಕಲ್ ಬ್ಯಾಟಿಂಗ್ ಮೆಚ್ಚಿ ಟ್ವೀಟ್ ಮಾಡಿದ್ದ ಯುವರಾಜ್ ಅವರು, ಫಾರ್ಮ್ ಎಂಬುದು ತಾತ್ಕಾಲಿಕ ಕ್ಲಾಸ್ ಎಂಬುದು ಎಂದಿಗೂ ಇರುತ್ತದೆ. ಕಳೆದ ಎಂಟು ವರ್ಷದಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದನ್ನು ನಾನು ನೋಡೇ ಇಲ್ಲ. ಇದು ನಂಬಲು ಆಗದ ಮಾತು. ಪಡಿಕಲ್ ತುಂಬು ಉತ್ತಮವಾಗಿ ಬ್ಯಾಟ್ ಮಾಡಿದ್ದಾರೆ. ಅವರ ಜೊತೆ ಬ್ಯಾಟ್ ಮಾಡಬೇಕು ಯಾರು ಜಾಸ್ತಿ ದೂರ ಸಿಕ್ಸ್ ಹೊಡೆಯುತ್ತಾರೆ ಎಂದು ನೋಡಬೇಕು ಎಂದು ಸ್ವೀಟ್ ಚಾಲೆಂಜ್ ನೀಡಿದ್ದರು.

 

 

ಯುವರಾಜ್ ಅವರ ಕಮೆಂಟ್ ನೋಡಿ ರೀಟ್ವೀಟ್ ಮಾಡಿರುವ ಪಡಿಕಲ್ ಅವರು, ನಿಮ್ಮ ಜೊತೆ ಸ್ಪರ್ಧೆ ಮಾಡುವುದಿಲ್ಲ ಪಾಜಿ. ನಾನು ಫ್ಲಿಕ್ ಶಾಟ್ ಹೊಡೆಯುವುದನ್ನು ನಿಮ್ಮಿಂದಲೇ ಕಲಿತ್ತಿದ್ದೇನೆ. ಸ್ಪರ್ಧೆ ಬೇಡ ಆದರೆ ನಿಮ್ಮ ಜೊತೆ ಬ್ಯಾಟಿಂಗ್ ಮಾಡುವ ಆಸೆ ಇದೆ. ಬನ್ನಿ ಎಂದು ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top