fbpx
ಸಮಾಚಾರ

ಅಫ್ಘಾನಿಸ್ತಾನ್ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ನಜೀಬ್ ದುರ್ಮರಣ

ಕಳೆದವಾರ ನಡೆದಿದ್ದರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಫ್ಘಾನಿಸ್ತಾನದ ಕ್ರಿಕೆಟ್​ ಆಟಗಾರ ನಜೀಬ್​ ತಾರಕೈ (29) ಮಂಗಳವಾರ ಮೃತಪಟ್ಟಿದ್ದಾರೆ.. ಕೋಮಾಕ್ಕೆ ಜಾರಿದ್ದ ನಜೀಬ್ ಅವರ ಜೀವ ಉಳಿಸುವ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ.

29 ವರ್ಷದ ನಜೀಬ್ ಕಳೆದ ಶುಕ್ರವಾರ ನಡೆದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಜಲಾಲಬಾದ್ ನ ಪೂರ್ವ ನಂಗರ್ಹಾರ್ ನಲ್ಲಿ ಅಪಘಾತ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಜೀಬ್ ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿ ಸ್ವತಃ ಟ್ವೀಟ್ ಮಾಡಿ ಈ ವಿಚಾರವನ್ನು ತಿಳಿಸಿದೆ.

 

 

‘ಎಸಿಬಿ ಮತ್ತು ಕ್ರಿಕೆಟ್ ಪ್ರೀತಿಸುವ ದೇಶವಾದ ಅಫ್ಘಾನಿಸ್ತಾನ್, ಟ್ರಾಫಿಕ್ ಅಪಘಾತದ ದುರಂತದಲ್ಲಿ ಆಕ್ರಮಣಕಾರಿ ಆರಂಭಿಕ ಆಟಗಾರ ಮತ್ತು ಬಹಳ ಮಾನವೀಯ ವ್ಯಕ್ತಿ ನಜೀಬ್ ತಾರಕೈ (29) ನಮ್ಮನ್ನೆಲ್ಲ ಅಗಲಿರುವ ಆಘಾತಕಾರಿ ಮತ್ತು ನೋವಿನ ಘಟನೆಗೆ ಸಂತಾಪ ವ್ಯಕ್ತಪಡಿಸುತ್ತಿದೆ. ಅವರ ಮೇಲೆ ಅಲ್ಲಾ ದಯೆ ತೋರಲಿ’ ಎಂದು ಎಸಿಬಿ ಟ್ವೀಟ್ ಮಾಡಿದೆ.

ನಜೀಬ್ ಅವರು 2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ನಲ್ಲಿ ನಜೀಬ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಅಫ್ಘಾನಿಸ್ತಾನದ ಪರ 12 ಟಿ20 ಮತ್ತು ಅಂತಾರಾಷ್ಟ್ರೀಯ ಏಕದಿನ ಪಂದ್ಯವೊಂದನ್ನು ಆಡಿದ್ದರು. ಗ್ರೇಟರ್​ ನೋಯ್ಡಾದಲ್ಲಿ ನಡೆದ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಅವರು 90 ರನ್​ ಬಾರಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top