fbpx
ಸಮಾಚಾರ

ಕಾಜಲ್‌ಗೆ ಕೂಡಿಬಂತು ಕಂಕಣಭಾಗ್ಯ : ಅಕ್ಟೋಬರ್ 30ಕ್ಕೆ ಉದ್ಯಮಿ ಜೊತೆ ಮದುವೆ

ಬಹುಭಾಷೆಯಲ್ಲಿ ಮಿಂಚುತ್ತಿರುವ ನಟಿ ಕಾಜಲ್‌ ಅಗರ್ವಾಲ್‌ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹಾಗಂತ ಇದು ಗಾಸಿಪ್‌ ಅಲ್ಲ. ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಆ ಮೂಲಕ ಇಷ್ಟು ದಿನ ಕೇಳಿಬಂದಿದ್ದ ಎಲ್ಲ ಸುದ್ದಿಗಳಿಗೆ ಅವರು ಈಗ ಸ್ಪಷ್ಟನೆ ನೀಡಿದ್ದಾರೆ. ಮದುವೆ ಎಲ್ಲಿ? ಯಾವಾಗ? ಹುಡುಗ ಯಾರು ಎಂಬ ಪ್ರಶ್ನೆಗಳಿಗೂ ಅವರು ಉತ್ತರ ನೀಡಿದ್ದಾರೆ.

 

 

ನಟಿ ಕಾಜಲ್ ಈ ಬಗ್ಗೆ ಟ್ವೀಟ್ ಮಾಡಿ ವಿವಾಹದ ಮಾಹಿತಿ ನೀಡಿದ್ದಾರೆ. ನಾನು ಇದೇ ಅಕ್ಟೋಬರ್ 30ರಂದು ಗೌತಮ್ ಕಿಟ್ಚು ಅವರನ್ನು ಮುಂಬೈನಲ್ಲಿ ಮದುವೆ ಆಗುತ್ತಿದ್ದೇನೆ. ಮದುವೆಗೆ ಕೇವಲ ಕುಟುಂಬಸ್ಥರು ಮತ್ತು ಆಪ್ತರನ್ನ ಮಾತ್ರ ಆಹ್ವಾನಿಸಲಾಗಿದೆ. ಹೊಸ ಜೀವನಕ್ಕೆ ಕಾಲಿಡಲು ನಾನು ಥ್ರಿಲ್ ಆಗಿದ್ದೇನೆ. ಇಷ್ಟು ದಿನ ನೀವು ತೋರಿಸಿದ ಅನಿಯಮಿತ ಪ್ರೀತಿಗೆ ಅಭಾರಿಯಾಗಿದ್ದು, ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಹೊಸ ಬದುಕಿಗೆ ಎಂಟ್ರಿ ಕೊಡಲು ಉತ್ಸುಕಳಾಗಿದ್ದೇನೆ. ಮುಂದೆಯೂ ನಾನು ಸಿನಿಮಾಗಳಲ್ಲಿ ನಟಿಸುವ ಮೂಲಕ ನಿಮ್ಮನನ್ನ ರಂಜಿಸುತ್ತೇನೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು ಎಂದು ಕಾಜಲ್ ಬರೆದುಕೊಂಡಿದ್ದಾರೆ.

 

 

‘ನಾನು ಬೆಳ್ಳಿತೆರೆಯಲ್ಲಿ ಇಷ್ಟು ದೀರ್ಘಕಾಲ ಉಳಿಯಲು ಅಭಿಮಾನಿಗಳೇ ಕಾರಣ. ಇದೇ ಅಭಿಮಾನವನ್ನು ಮುಂದೆಯೂ ನನಗೆ ನೀಡಿ. ನಿಮ್ಮ ಆಶೀರ್ವಾದದಿಂದಲೇ ಹೊಸ ಪಯಣ ಆರಂಭಿಸಲು ನಿರ್ಧರಿಸಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ಮದುವೆಯ ಬಳಿಕವೂ ನಾನು ಸಿನಿಮಾಗಳಲ್ಲಿ ನಟಿಸುತ್ತೇನೆ’ ಎಂದು ಕಾಜಲ್ ತಿಳಿಸಿದ್ದಾರೆ.

ಯಾರು ಈ ಗೌತಮ್?
ಕಾಜಲ್ ಅಗರ್ವಾಲ್ ಮದುವೆ ಆಗುತ್ತಿರುವ ಗೌತಮ್ ಕಿಟ್ಜು, ಡಿಸರ್ನ್ ಲಿವಿಂಗ್ ಸಂಸ್ಥೆಯ ಸ್ಥಾಪಕರು. ಇನ್ನು ಗೌತಮ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ತಾವು ಓರ್ವ ಇಂಟಿರೀಯರ್ ಡಿಸೈನರ್, ಡಿಸರ್ನ್ ಲಿವಿಂಗ್ ಸ್ಥಾಪಕ ಎಂದು ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top