ಮೊನ್ನೆ ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಚಿರಂಜೀವಿ ಅಗಲಿಕೆಯ ನೋವಿನಲ್ಲಿದ್ದ ಸರ್ಜಾ ಕುಟುಂಬ ಮೇಘನಾ ಸೀಮಂತ ಮಾಡುವ ಮೂಲಕ ಖುಷಿಪಟ್ಟಿದ್ದಾರೆ.
ಸೀಮಂತದಲ್ಲಿ ಚಿರು ಇಲ್ಲ ಎಂಬ ನೋವು ಎಲ್ಲರಿಗೂ ಕಾಡಿತ್ತು. ಆದರೂ ಮೇಘನಾ ಸೀಮಂತ ಕಾರ್ಯಕ್ರಮದಲ್ಲಿ ಚಿರುವಿನ ದೊಡ್ಡ ಪೋಸ್ಟರ್ವೊಂದನ್ನು ಇಡಲಾಗಿತ್ತು. ಚಿರು ಫೋಟೋ ಮುಂದೆಯೇ ಮೇಘನಾ ಚೇರ್ ಮೇಲೆ ಕುಳಿತುಕೊಂಡಿದ್ದು, ಅವರಿಗೆ ಸೀಮಂತ ಶಾಸ್ತ್ರ ಮಾಡಲಾಗಿತ್ತು. ಇದೇ ವೇಳೆ ಮೇಘನಾ ಅನೇಕ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಚಿರು ಇರಬೇಕಿತ್ತು ಎಂಬ ಎಲ್ಲರ ಆಸೆಯನ್ನು ಕಲ್ಪನಾಲೋಕದಲ್ಲಿ ಈಡೇರಿಸಿದ್ದಾರೆ ಕಲಾವಿದ ಕರಣ್ ಆಚಾರ್ಯ. ಕರಣ್ ಆಚಾರ್ಯ ಅವರಿಗೆ ಚಿರು ಅಭಿಮಾನಿಯೊಬ್ಬರು ಮೇಘನಾ ರಾಜ್ ಅವರ ಸೀಮಂತದ ಫೋಟೋ ಕಳುಹಿಸಿ ಹೊಸ ರೂಪ ನೀಡುವಂತೆ ಕೋರಿದ್ದರು.
ಆ ಕೋರಿಕೆಗೆ ಪ್ರತಿಕ್ರಿಯಿಸಿರುವ ಕರಣ್ ಆಚಾರ್ಯ ಮೋಡಿಯನ್ನೇ ಮಾಡಿದ್ದಾರೆ. ತುಂಬು ಗರ್ಭಿಣಿ ಮೇಘನಾ ರಾಜ್ ಅವರನ್ನು ಚಿರಂಜೀವಿ ಸರ್ಜಾ ಕೈ ಹಿಡಿದು ನಡೆಸಿಕೊಂಡು ಬರುತ್ತಿರುವ ರೀತಿಯಲ್ಲಿ ಎಡಿಟ್ ಮಾಡಿದ್ದಾರೆ. ಅದನ್ನು ನೋಡುತ್ತಿದ್ದರೆ ಚಿರು ಮತ್ತೆ ಮರುಜೀವ ತಾಳಿ ಬಂದಿದ್ದಾರೇನೋ ಎಂಬಷ್ಟು ನೈಜವಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
