fbpx
ಸಮಾಚಾರ

ವಿದೇಶದಲ್ಲಿ ಉನ್ನತ ಶಿಕ್ಷಣ ಪೂರೈಸಲು ಬಡ ಯುವತಿಗೆ ನೆರವು ನೀಡಿದ ಪ್ರಕಾಶ್ ರೈ:

ನಟ ಪ್ರಕಾಶ್ ರಾಜ್ ಅವರು ಲಾಕ್‌ಡೌನ್ ಟೈಮ್‌ನಲ್ಲಿ ಸಾಕಷ್ಟು ಸಹಾಯ ಮಾಡಿದ್ದರು. ಸಾಲ ಮಾಡಿಯಾದರೂ ನಾನು ಸಹಾಯ ಮಾಡ್ತೀನಿ ಅಂತ ಪ್ರಕಾಶ್ ರೈ ಹೇಳಿದ್ದರು. ಈಗ ಅವರು ಮತ್ತೊಂದು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಯುವತಿಯೊಬ್ಬರಿಗೆ ವಿದೇಶದಲ್ಲಿ ಓದಲು ಪ್ರಕಾಶ್ ರೈ ಸಹಾಯ ಮಾಡಿದ್ದಾರೆ. ‘ಸಿರಿ ಚಂದನ’ ಹೆಸರಿನ ವಿದ್ಯಾರ್ಥಿನಿ ಟಿಗಿರಿಪಲ್ಲಿ ಸಿರಿಚಂದನ ಇತ್ತೀಚೆಗೆ ಕಂಪ್ಯೂಟರ್ ಸೈನ್ಸ್ ಪದವಿ ಪೂರೈಸಿದ್ದಾರೆ. ಬಳಿಕ ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ನಗರದ ಪ್ರತಿಷ್ಠಿತ ಸಾಲ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವಲ್ಲಿ ಸಫಲರಾಗಿದ್ದಾರೆ. ಆದರೆ ಅವರ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಅಷ್ಟು ಶುಲ್ಕವನ್ನು ಭರಿಸುವ ಶಕ್ತಿ ಅವರಲ್ಲಿ ಇರಲಿಲ್ಲ. ಹೀಗಾಗಿ ಅಸಹಾಯಕರಾಗಿದ್ದರು. ಇದನ್ನರಿತ ನಟ ಪ್ರಕಾಶ್ ರೈ, ವಿದ್ಯಾರ್ಥಿನಿಗೆ ಬೋಧನಾ ಶುಲ್ಕ ಹಾಗೂ ಆಕೆಯ ಜೀವನ ವೆಚ್ಚ ಪಾವತಿಸಿದ್ದಾರೆ.

ಸಿರಿ ಚಂದನ ಬಗ್ಗೆ ಅವರ ಗುರುಗಳಾದ ನರೇಶ್ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಸಿರಿ ಚಂದನ ಶಿಕ್ಷಣಕ್ಕೆ ನೆರವಾಗುವಂತೆ ಮನವಿ ಮಾಡಿದ್ದರು. ಈ ಪೋಸ್ಟ್ ಹೇಗೋ ಪ್ರಕಾಶ್ ರೈ ಕಣ್ಣಿಗೆ ಬಿದ್ದಿದೆ. ಕೂಡಲೇ ಸ್ಪಂದಿಸಿದ ಪ್ರಕಾಶ್ ರೈ, ಸಿರಿ ಚಂದನ ಅವರ ಓದಿನ ಸಂಪೂರ್ಣ ವೆಚ್ಚವನ್ನು ತಾವು ಭರಿಸುವುದಾಗಿ ಒಪ್ಪಿಕೊಂಡಿದ್ದಾರೆ.

ಸಿರಿ ಚಂದನ, ವಿದೇಶದಲ್ಲಿ ಉಳಿದುಕೊಳ್ಳುವ ಖರ್ಚು, ಟ್ಯುಶನ್ ಖರ್ಚು, ಪ್ರಯಾಣದ ಖರ್ಚನ್ನು ಪ್ರಕಾಶ್ ರೈ ಅವರೇ ಭರಿಸುತ್ತಿದ್ದಾರೆ. ಪ್ರಕಾಶ್ ರೈ ಅವರು ಸಹಾಯ ಮಾಡುತ್ತಿದ್ದಂತೆ ಚಂದನಾ ಅವರನ್ನು ಭೇಟಿಯಾಗಿ ತನ್ನ ಕನಸನ್ನು ಸಾಕಾರಗೊಳಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಪ್ರಕಾಶ್ ರೈ ಸರ್‍ಗೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ಅಲ್ಲದೆ ಇತರರಿಗೆ ನಾನು ಸಹಾಯ ಮಾಡುವ ಕುರಿತು ಸಹ ಅವರು ಕಲಿಸಿಕೊಟ್ಟರು ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top