fbpx
ಸಮಾಚಾರ

ಬಾಲಿವುಡ್ ನಟ ಅಜಯ್ ದೇವಗನ್ ಸಹೋದರ ಅನಿಲ್ ನಿಧನ

ಬಾಲಿವುಡ್ ಸೂಪರ್‌ಸ್ಟಾರ್ ಅಜಯ್ ದೇವ್‌ಗನ್ ಅವರ ಸಹೋದರ ಅನಿಲ್ ದೇವ್‌ಗನ್ ಅವರು ಸೋಮವಾರ ರಾತ್ರಿ ಕೊನೆಯುಸಿರೆಳೆದರು. ಅನಿಲ್ ದೇವಗನ್ ಪ್ರೇಮ್ ಪ್ರಕಾಶ್ ದೇವಗನ್ ಅವರ ಪುತ್ರ ಮತ್ತು ಅಜಯ್ ದೇವಗನ್ ಅವರ ಸೋದರ ಸಂಬಂಧಿ ಅವರಿಗೆ 45 ವರ್ಷ ವಯಸ್ಸಾಗಿತ್ತು.

ಅವರ ನಿಧನದ ಸುದ್ದಿಯನ್ನು ಅಜಯ್ ದೇವಗನ್ ಅವರೇ ಮಂಗಳವಾರ ಟ್ವೀಟರ್ ಪೋಸ್ಟ್ ಮೂಲಕ ದೃಢೀಕರಿಸಿದ್ದು, ತಮ್ಮ ಸಹೋದರನ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

ಕಳೆದ ರಾತ್ರಿ ನನ್ನ ಸಹೋದರ ಅನಿಲ್ ದೇವಗನ್ ಅವರನ್ನು ಕಳೆದುಕೊಂಡಿದ್ದೇನೆ. ಅವರ ಅಕಾಲಿಕ ನಿಧನವು ನಮ್ಮ ಕುಟುಂಬವನ್ನು ಎದೆಗುಂದಿಸಿದೆ. ಫಿಲ್ಮ್ ಕಂಪನಿ ಎಡಿಎಫ್ಎಫ್ ಮತ್ತು ನಾನು ಅವರ ಪ್ರೀತಿಯ ಉಪಸ್ಥಿತಿಯನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ. ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನಾವು ವೈಯಕ್ತಿಕ ಪ್ರಾರ್ಥನಾ ಸಭೆ ನಡೆಸುವುದಿಲ್ಲ ಎಂದು 51 ವರ್ಷದ ನಟ ಟ್ವೀಟ್ ಮಾಡಿದ್ದಾರೆ.

ಚಲನಚಿತ್ರ ನಿರ್ದೇಶಿಸುವುದರ ಜೊತೆಗೆ ಅಜಯ್ ದೇವಗನ್ ಅಭಿನಯದ ‘ಸನ್ ಆಫ್ ಸರ್ದಾರ್’ ಚಿತ್ರದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಅಜಯ್ ದೇವಗನ್ ಅವರ ತಂದೆ ವೀರು ದೇವಗನ್ ಅವರು ಕಳೆದ ವರ್ಷ ನಿಧನರಾಗಿದ್ದರು. ಸನಿಲ್ ದೇವಗನ್ ನಿಧನಕ್ಕೆ ಬಾಲಿವು ಚಿತ್ರರಂಗ ಹಾಗೂ ಅವರ ಅಭಿಮಾನಿ ಬಳಗ ಸಂತಾಪ ಸೂಚಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top