fbpx
ಸಮಾಚಾರ

ಮಗಳಿಗೆ ‘ಕನ್ನಡ ಶೆಟ್ಟಿ’ ಎಂದು ಹೆಸರಿಟ್ಟ ದಂಪತಿ: ಕನ್ನಡಾಭಿಮಾನಕ್ಕೆ ವ್ಯಾಪಕ ಮೆಚ್ಚುಗೆ

ಕನ್ನಡವನ್ನು ಅತಿಯಾಗಿ ಪ್ರೀತಿಸುವ ಬೆಂಗಳೂರು ಉದ್ಯಮಿ ತನ್ನ ಮಗಳಿಗೆ ಕನ್ನಡವೆಂದು ಹೆಸರಿಟ್ಟಿದ್ದಾರೆ. ಉಡುಪಿ ಮೂಲದ ಈ ಕುಟುಂಬದ ಕನ್ನಡ ಪ್ರೇಮ ಕರುನಾಡಿಗೆ ಮಾದರಿಯಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ ಅಪ್ಪಟ ಕನ್ನಡಾಭಿಮಾನಿ. . ಸದ್ದಿಲ್ಲದೇ ಕನ್ನಡವನ್ನು ಉಳಿಸೋ ಕಾರ್ಯವನ್ನು ಮಾಡುತ್ತಿರೋ ಪ್ರತಾಪ್ ಶೆಟ್ಟಿ ಹಾಗೂ ಪ್ರತಿಮಾ ಶೆಟ್ಟಿ ದಂಪತಿ ಇದೀಗ ತಮ್ಮ ಹೆಣ್ಣು ಮಗುವಿಗೆ ಕನ್ನಡ ಶೆಟ್ಟಿ ಎಂದು ಹೆಸರಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ನವೆಂಬರ್​ 2019 ರ ನವೆಂಬರ್​ 7 ರಂದು ಹುಟ್ಟಿರುವ ಕನ್ನಡ ಶೆಟ್ಟಿಗೆ ಮುಂದಿನ ತಿಂಗಳು ಒಂದು ವರ್ಷ ತುಂಬುತ್ತಿದೆ. ಮಗಳಿಗೆ ಕನ್ನಡವೆಂದು ಹೆಸರಿಟ್ಟಿರುವುದು ಮಾತ್ರವಲ್ಲ. ಅದೇ ಹೆಸರಿನಲ್ಲಿ ಜನನ ಪ್ರಮಾಣ ಪತ್ರವನ್ನು ನೋಂದಾಯಿಸಿ ಕೊಂಡಿದ್ದಾರೆ. ಬಿಬಿಎಂಪಿ ಜನನ ಪ್ರಮಾಣ ಪತ್ರವನ್ನು ನೋಂದಣಿ ಮಾಡಿದೆ.

ಮರೆಯಾಗುತ್ತಿರುವ ಕನ್ನಡಾಭಿಮಾನವನ್ನು ಉಳಿಸುವ ನಿಟ್ಟಿನಲ್ಲಿ ಮಗುವಿನಗೆ ಕನ್ನಡಾಂಬೆಯ ಹೆಸರಿಟ್ಟಿದ್ದೇವೆ. ಮಾತ್ರವಲ್ಲ ಕನ್ನಡದ ಕಂಪು ಪಸರಿಸುವ ಮಾರ್ಗವನ್ನು ತೋರಿಸುತ್ತೇವೆ ಎಂದು ಮಗುವಿನ ತಂದೆ ಪ್ರತಾಪ್​​ ಶೆಟ್ಟಿ ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top