ತಮ್ಮ ವಿರುದ್ಧ ಗುಡುಗಿದ್ದ ಅತ್ತೆ ಗೌರಮ್ಮ ಬಗ್ಗೆ ಡಿಕೆ ರವಿ ಪತ್ನಿ ಕುಸುಮಾ ಪ್ರತಿಕ್ರಿಯೆ ನೀಡಿದ್ದಾರೆ. “ಅವರು ನೀಡಿರುವ ಹೇಳಿಕೆಯನ್ನು ಆಶೀರ್ವಾದ ಎಂದು ಭಾವಿಸುತ್ತೇನೆ. ” ಎಂದು ರಾಜರಾಜೇಶ್ವರಿನ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೇಳಿದ್ದಾರೆ.
ಆರ್.ಆರ್.ನಗರ ಕ್ಷೇತ್ರ ವ್ಯಾಪ್ತಿಯ ಯಶವಂತಪುರ ಶನೇಶ್ವರ ದೇವಾಲಯದ ಆವರಣದಲ್ಲಿ ನಡೆದ ತಮ್ಮ ಪಕ್ಷದ ಚುನಾವಣಾ ಪೂರ್ವಭಾವಿ ಸಭೆಯ ವೇಳೆ ಅವರು ಮಾತನಾಡಿದರು. ಇದೇ ವೇಳೆ ತಮ್ಮ ಅತ್ತೆ ಗೌರಮ್ಮ ಅವರು ನೀಡಿರುವ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಸುಮಾ ಅವರು ‘ಅವರು ದೊಡ್ಡವರು, ನನ್ನ ವಿರುದ್ಧ ಏನಾದರೂ ಮಾತನಾಡಲಿ. ಅದನ್ನೇ ನನಗೆ ನೀಡಿದ ಆಶೀರ್ವಾದ ಎಂದು ಭಾವಿಸುತ್ತೇನೆ. ” ಎಂದು ಹೇಳಿದರು
“ಡಿ.ಕೆ. ರವಿ ಪತ್ನಿ ಎಂದು ನನಗೆ ಟಿಕೆಟ್ ಕೊಟ್ಟಿಲ್ಲ. ವಿದ್ಯಾವಂತೆ, ಮಹಿಳೆ ಎಂಬ ಕಾರಣಕ್ಕೆ ಟಿಕೆಟ್ ಕೊಟ್ಟಿದ್ದಾರೆ. ಸಮಾಜ ಸೇವೆಗಾಗಿ ಬಂದಿದ್ದೇನೆ. ನಾನು ಹನುಮಂತರಾಯಪ್ಪನ ಮಗಳ ಜತೆಗೆ ಡಿ.ಕೆ. ರವಿ ಪತ್ನಿ ಕೂಡ ಹೌದು ” ಎಂದು ಹೇಳಿದರು
ಸೊಸೆ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಗುಡುಗಿದ್ದ ಗೌರಮ್ಮ “ಆಕೆ ಚುನಾವಣೆಗೆ ನಿಂತುಕೊಂಡರೂ ನನ್ನ ಮಗನ ಹೆಸರು, ಫೋಟೋ ಹಾಕಬಾರದು. ಒಂದು ವೇಳೆ ಹೆಸರು, ಫೋಟೋ ಹಾಕಿಕೊಂಡರೆ ನಾನೇ ಹುಡುಗರನ್ನು ಕರೆದುಕೊಂಡು ಹೋಗಿ ಬೆಂಕಿ ಹಚ್ಚಿಸುತ್ತೇವೆ ಎಂದು ಎಚ್ಚರಿಸಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
