fbpx
ಸಮಾಚಾರ

ಮೊಣಕೈನಲ್ಲಿ ಪುನೀತ್ ಚಿತ್ರ ರಚಿಸಿದ ಅಭಿಮಾನಿ; ಕಲಾವಿದನ ಅಭಿಮಾನಕ್ಕೆ ಮನಸೋತ ಪುನೀತ್ ಹೇಳಿದ್ದೇನು?

ಅಭಿಮಾನಿಯೊಬ್ಬ ತನ್ನ ಮೊಣಕೈನಲ್ಲಿ ಭಾವಚಿತ್ರ ಬಿಡಿಸಿ ನಟ ಪುನೀತ್ ರಾಜ್ ಕುಮಾರ್ ಗಮನ ಸೆಳೆದಿದ್ದಾನೆ. ತನ್ನ ಮೊಣಕೈ ಬಳಸಿಕೊಂಡು ಅಪ್ಪು ಚಿತ್ರ ಬಿಡಿಸಿದ ಕಲಾವಿದನ ಕಲೆಗೆ ಪವರ್ ಸ್ಟಾರ್ ಮನಸೋತಿದ್ದಾರೆ. ಅಲ್ಲದೆ ತುಂಬಾ ತುಂಬಾನೇ ಧನ್ಯವಾದ ಎಂದು ಹೇಳಿದ್ದಾರೆ.

ಈ ಕುರಿತು ಅಭಿಮಾನಿ ತನ್ನ ಭಾವಚಿತ್ರ ಬಿಡಿಸುತ್ತಿರುವ ವೀಡಿಯೋ ಶೇರ್ ಮಾಡಿರುವ ಅಪ್ಪು, ಕಲೆಗೆ ಬೆಲೆ ಕಟ್ಟೋದಕ್ಕೆ ಆಗಲ್ಲ ನಿಜ, ಆದರೆ ಅಭಿಮಾನಿಗಳ ಪ್ರೀತಿಗೂ ಬೆಲೆ ಕಟ್ಟೋದಕ್ಕೆ ಆಗಲ್ಲ, ಮಾತುಗಳಲ್ಲಿ ಅಂತೂ ಏನು ಹೇಳೋದಕ್ಕೆ ಆಗಲ್ಲ. ತುಂಬಾ ತುಂಬಾ ಥ್ಯಾಂಕ್ಸ್ ಎಂದು ಬರೆದುಕೊಂಡಿದ್ದಾರೆ.\

 

 

ಈ ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ನೆಟ್ಟಿಗರು ಕಲಾವಿದನ ಈ ವಿಶೇಷ ಪ್ರತಿಭೆಗೆ ಬಹುಪರಾಕ್ ಹೇಳಿದ್ದಾರೆ. ಅಂದಹಾಗೆ, ಈ ಕಲಾವಿದನ ಹೆಸರು ನಾಗರಾಜ್‌. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಗಂಗನರಸಿ ಊರಿನವರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top