fbpx
ಸಮಾಚಾರ

ಸಿಎಂ ಖಾತೆಯಿಂದ 58 ಕೋಟಿ ರೂ. ದೋಚಲು ಯತ್ನ; ನಿರ್ದೇಶಕ ಉದಯ ಶೆಟ್ಟಿ ಅರೆಸ್ಟ್​

ಆಂಧ್ರ ಪ್ರದೇಶ ಮುಖ್ಯಮಂತ್ರಿ ರಿಲೀಫ್​ ಫಂಡ್​ನಿಂದ 58 ಕೋಟಿ ರೂ. ದೋಚಲು ಮುಂದಾಗಿದ್ದ ಕೋಸ್ಟಲ್​ವುಡ್​ ನಿರ್ದೇಶಕ ಉದಯ್ ಕುಮಾರ್ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮೂಡಬಿದಿರೆ ನಿವಾಸಿ ಯೋಗಿಶ್ ಆಚಾರ್ಯ, ನಿರ್ದೇಶಕ ಉದಯ ಶೆಟ್ಟಿ ಕಾಂತಾವರ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ್ ಸುವರ್ಣ ಬಂಧಿತ ಆರೋಪಿಗಲಾಗಿದ್ದು ಮತ್ತಿಬ್ಬರ ಹೆಸರು ತಿಳಿದುಬಂದಿಲ್ಲ.

ನಕಲಿ ಚೆಕ್ ಬಳಸಿಕೊಂಡು ಸಿಎಂ ರಿಲೀಫ್ ಫಂಡ್​ನಿಂದ 58 ಕೋಟಿ ರೂ. ವಿತ್ ಡ್ರಾ ಮಾಡಲು ಖದೀಮರು ಮುಂದಾಗಿದ್ದರು. ಆದರೆ, ಅವರ ವರ್ತನೆ ಮತ್ತು ಭಾರೀ ಮೊತ್ತದ ವಿತ್ ಡ್ರಾ ಮಾಡುತ್ತಿರುವುದನ್ನ ಕಂಡು ಅನುಮಾನಗೊಂಡ ಬ್ಯಾಂಕ್ ಮ್ಯಾನೆಜರ್ ಆಂಧ್ರ ಸರ್ಕಾರದ ಜೊತೆ ಸಂವಹನ ನಡೆಸಿದ್ದರು..

ಈ ವೇಳೆ ಅಷ್ಟೊಂದು ಮೊತ್ತದ ಚೆಕ್ ಕೊಟ್ಟಿಲ್ಲ ಎಂಬ ವಿಚಾರವನ್ನು ಬ್ಯಾಂಕ್ ಮ್ಯಾನೇಜರ್ ತಿಳಿದುಕೊಂಡಿದ್ದಾರೆ. ನಂತರ ಬ್ಯಾಂಕ್​ ಮ್ಯಾನೇಜರ್​ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಪೊಲೀಸರು ಇವರನ್ನು ಬಂಧಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top