fbpx
ಸಮಾಚಾರ

ಟಿ20 ಕ್ರಿಕೆಟ್ ನಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ ಕಿಂಗ್ ಕೊಹ್ಲಿ

ಐಪಿಎಲ್-2020 ರ ಆರ್ ಸಿಬಿ- ಡೆಲ್ಲಿ ನಡುವೆ ಅ.06 ರಂದು ನಡೆದ ಪಂದ್ಯದಲ್ಲಿ ಆರ್ ಸಿಬಿ 59 ರನ್ ಗಳ ಸೋಲು ಕಂಡಿದೆ. ಈ ಮೂಲಕ ಈ ಐಪಿಎಲ್ ಆವೃತ್ತಿಯಲ್ಲಿ 2 ನೇ ಸೋಲು ದಾಖಲಿಸಿದೆ. ಸೋಲಿನ ನಡುವೆಯೂ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ವಿನೂತನ, ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 10 ರನ್‌ ದಾಖಲಿಸುತ್ತಿದ್ದಂತೆ ವಿರಾಟ್‌ ಹೊಸ ದಾಖಲೆಗೆ ಸಾಕ್ಷಿಯಾದ್ರು. ಟಿ20 ಪಂದ್ಯಗಳಲ್ಲಿ 9000 ರನ್ ಗಳಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಕೊಹ್ಲಿ ತಮ್ಮ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. 286 ಪಂದ್ಯಗಳಲ್ಲಿ ವಿರಾಟ್‌ 9000 ರನ್‌ ದಾಖಲಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲನೇ ಮತ್ತು ವಿಶ್ವದ ಏಳನೇ ಕ್ರಿಕೆಟಿಗನಾಗಿದ್ದಾನೆ.

ಇದಕ್ಕೂ ಮುನ್ನ ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್ – 13296 ರನ್), ಕೀರನ್ ಪೊಲಾರ್ಡ್ ( ವೆಸ್ಟ್ ಇಂಡೀಸ್ – 10370), ಶೋಯೆಬ್ ಮಲಿಕ್ (ಪಾಕಿಸ್ತಾನ – 9926), ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್ – 9922), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ – 9451) ಮತ್ತು ಆರೋನ್ ಫಿಂಚ್ (ಆಸ್ಟ್ರೇಲಿಯಾ – 9148) ಕೊಹ್ಲಿಗಿಂತ ಮುಂದಿನ ಸ್ಥಾನದಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top