fbpx
ಸಮಾಚಾರ

ಮಹೇಂದ್ರ ಸಿಂಗ್ ಧೋನಿ 5 ವರ್ಷದ ಪುತ್ರಿಗೆ ಅ*ತ್ಯಾಚಾ-ರದ ಬೆದರಿಕೆ

ಬುಧವಾರ ಕೊಲ್ಕತ್ತಾ ನೈಟ್‌ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಗೆಲ್ಲುವ ಪಂದ್ಯವನ್ನ ಕೈ ಚೆಲ್ಲಿತು. ಈ ಪಂದ್ಯದಲ್ಲಿ ಧೋನಿ ಚೆನ್ನಾಗಿ ಆಡಿಲ್ಲವೆಂದು ಆತನ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿರುವ ಹೇಯ ಘಟನೆಯೊಂದು ಬೆಳಕಿಗೆ ಬಂದಿದೆ.

ಸಿಎಸ್‌ಕೆ ಸೋಲಿಗೆ ದುರಭಿಮಾನಿಗಳ ವರ್ತನೆಯು ಎಲ್ಲೆ ಮೀರಿದ್ದು, ಆಟಗಾರರ ಮೇಲಿನ ಈ ನಿಂದನೆ ವಿಡಂಬನೆಯನ್ನು ದಾಟಿ ಇದೀಗ ಮಕ್ಕಳ ವಿರುದ್ದ ಬೆದರಿಕೆಯೊಡ್ಡಿರುವ ಘಟನೆ ಜರುಗಿದೆ.

 

 

ನೂರಾರು ಜನರು ಧೋನಿ ಅವರನ್ನು ಟ್ರೋಲ್ ಮಾಡಿದ್ದು, ಧೋನಿಯ ಐದು ವರ್ಷದ ಮಗಳಿಗೆ ಬೆದರಿಕೆ ಹಾಕುವ ಕೆಲವು ಟ್ವೀಟ್‌ಗಳು ಮತ್ತು ಫೇಸ್‌ಬುಕ್ ಪೋಸ್ಟ್‌ಗಳು ಸಹ ಕಂಡಿವೆ. ಮತ್ತು ಇವು ಕೇವಲ ಬೆದರಿಕೆ ಮಾತ್ರವಲ್ಲದೇ, ಇವು ಅತ್ಯಾಚಾರ ಮತ್ತು ದೈಹಿಕ ಹಿಂಸೆಯ ಬೆದರಿಕೆಗಳಾಗಿವೆ. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಅವರ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಬೆದರಿಕೆಗಳು ಕಾಣಿಸಿಕೊಂಡಿವೆ.

 

 

ಚೆನ್ನೈ ಸೂಪರ್‌ ಕಿಂಗ್ಸ್‌ ಕಳೆದ ಪಂದ್ಯದ ಸೋಲಿಗೆ ಮಹೇಂದ್ರ ಸಿಂಗ್ ಧೋನಿ ಪುತ್ರಿ ವಿರುದ್ಧ ಕೇಳಿಬಂದಿರುವ ಬೆದರಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತಪವಾಗುತ್ತಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top