fbpx
ಸಮಾಚಾರ

ಗೂಗಲ್​ನಲ್ಲಿ ರಶೀದ್ ಪತ್ನಿ ಹುಡುಕಿದ್ರೆ ಅನುಷ್ಕಾ ಹೆಸರು ಬರುತ್ತೆ: ಏಕೆ ಗೊತ್ತಾ? ಇಲ್ಲಿದೆ ಅಚ್ಚರಿಯ ಕಾರಣ!

ವಿಚಿತ್ರ ಎನಿಸಿದರೂ ಇದು ಸತ್ಯ., ನೀವು ಗೂಗಲ್ ಸರ್ಚ್ ಬಾರ್‌ನಲ್ಲಿ ‘ರಶೀದ್ ಖಾನ್ ಪತ್ನಿ(Rashid Khan wife)’ ಎಂದು ಟೈಪ್ ಮಾಡಿದರೆ, ಫಲಿತಾಂಶಗಳ ಪುಟದಲ್ಲಿ ನಟಿ ‘ಅನುಷ್ಕಾ ಶರ್ಮಾ’ ಅವರ ಹೆಸರು ಮೊದಲು ಕಾಣಿಸಿಕೊಳ್ಳುತ್ತದೆ..

 

 

ಅನುಷ್ಕಾ ಶರ್ಮಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪತ್ನಿ. ಹಾಗಾದರೆ, ಗೂಗಲ್‌ನಲ್ಲಿ ರಶೀದ್ ಖಾನ್ ಅವರ ಹೆಂಡತಿ ಎಂದು ಸರ್ಚ್ ಮಾಡಿದರೆ ಅನುಷ್ಕಾ ಹೆಸರು ಏಕೆ ಕಾಣಿಸಿಕೊಳ್ಳುತ್ತದೆ? ಈ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇದೆಯೇ? ಗೂಗಲ್ ಏಕೆ ಹೀಗೆ ತೋರಿಸುತ್ತೆ ಅಂತೀರಾ? ಮುಂದೆ ಓದಿ

2018ರಲ್ಲಿ ಇನ್‌ಸ್ಟಾಗ್ರಾಂ ಚಾಟ್ ವೇಳೆ ರಶೀದ್ ಅವರ ಅಭಿಮಾನಿಗಳು ನಿಮ್ಮ ನೆಚ್ಚಿನ ಬಾಲಿವುಡ್ ನಟಿ ಯಾರೆಂದು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ರಶೀದ್ ಅವರು ಅನುಷ್ಕಾ ಶರ್ಮಾ ಹಾಗೂ ಪ್ರೀತಿ ಝಿಂಟಾ ಹೆಸರನ್ನು ಹೇಳಿದ್ದರು.

ಆನಂತರ ರಶೀದ್ ಖಾನ್‌ ಅವರ ನೆಚ್ಚಿನ ನಟಿ ಅನುಷ್ಕಾ ಶರ್ಮಾ ಎಂಬ ಸುದ್ದಿ ಹರಿದಾಡಿತ್ತು. ಆ ಬಳಿಕ ಗೂಗಲ್‌ನಲ್ಲಿ ಅನುಷ್ಕಾ ಶರ್ಮಾ ರಶೀದ್‌ನ ಪತ್ನಿ ಎಂದು ತೋರಿಸುತ್ತದೆ. ಹಾಗೆ ನೋಡಿದರೆ ರಶೀದ್ ಖಾನ್ ಅವರಿಗೆ ಇನ್ನೂ ಮದುವೆಯೇ ಆಗಿಲ್ಲ.

ಜುಲೈನಲ್ಲಿ ನಡೆದ ಸಂದರ್ಶನದಲ್ಲಿ ಈ ಕುರಿತು ರಶೀದ್‌ರಲ್ಲಿ ಕೇಳಿದಾಗ ನನಗೆ ಮದುವೆಯಾಗಿಲ್ಲ. ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದಾಗ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top