fbpx
ಸಮಾಚಾರ

ಧೋನಿ ಮಗಳಿಗೆ ರೇ*ಪ್ ಬೆದರಿಕೆ: ಟ್ರೋಲಿಗರ ವಿರುದ್ಧ ಇರ್ಫಾನ್ ಪಠಾಣ್ ಆಕ್ರೋಶ

ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಅವರ ಮಗಳಿಗೆ ಅತ್ಯಾಚಾರಕ್ಕೆ ಬೆದರಿಕೆ ಹಾಕಿದ್ದ ಘಟನೆಗೆ ಸಂಭಂದಿಸಿದಂತೆ ಭಾರತೀಯ ಕ್ರಿಕೆಟ್ ನ ಮಾಜಿ ಆಟಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯನ್ನು ವ್ಯಾಪಕವಾಗಿ ಖಂಡಿಸಲಾಗುತ್ತಿದೆ ಮತ್ತು ಇರ್ಫಾನ್ ಪಠಾಣ್ ಕೂಡ ಟ್ರೋಲಿಗರ ವರ್ತನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಎಲ್ಲಾ ಆಟಗಾರರು ಮೈದಾನದಲ್ಲಿ ಅತ್ಯುತ್ತಮವಾದದ್ದನ್ನು ನೀಡುತ್ತಾರೆ, ಕೆಲವೊಮ್ಮೆ ಅದು ಕೆಲಸ ಮಾಡುವುದಿಲ್ಲ ಆದರೆ ಚಿಕ್ಕ ಮಗುವಿಗೆ ಬೆದರಿಕೆ ನೀಡಲು ಇದು ಯಾರಿಗೂ ಅಧಿಕಾರ ನೀಡುವುದಿಲ್ಲ” ಎಂದು ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.

ಏನಿದು ವಿವಾದ:
ಕಳೆದ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ಗೆಲುವಿನ ಹಾದಿಯಲ್ಲಿ ಇದ್ದ ಚೆನೈ ತಂಡ ದಿಢೀರ್ ಕುಸಿತದಿಂದ 10 ರನ್‍ಗಳ ಅಂತರದಲ್ಲಿ ಸೋಲನ್ನು ಒಪ್ಪಿಕೊಂಡಿತ್ತು. ಈ ನಂತರ ಟ್ವಿಟ್ಟರಿನಲ್ಲಿ ಕಮೆಂಟ್ ಮಾಡಿರುವ ಕೆಲ ದುರಭಿಮಾನಿಗಳು ಧೋನಿ ಮಗಳನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆವೊಡ್ಡಿದ್ದರು. ಜೊತೆಗೆ ಅಸಭ್ಯ ಪದಗಳನ್ನು ಬಳಸಿ ಐದು ವರ್ಷದ ಕಂದಮ್ಮನನ್ನು ನಿಂದಿಸಿದ್ದನು.

ಇನ್ನು ಚಿಕ್ಕ ಮಗುವಿನ ಮೇಲೆ ಈ ರೀತಿ ಬೆದರಿಕೆ ಹಾಕಿರುವುದು ಸೋಶಿಯಲ್ ಮಿಡಿಯಾದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಹಿಳೆಯರು ಈ ಬಗ್ಗೆ ಕಿಡಿಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top