fbpx
ಸಮಾಚಾರ

ಐಪಿಎಲ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಎಬಿ ಡಿ ವಿಲಿಯರ್ಸ್

ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಎಬಿ ಡಿವಿಲಿಯರ್ಸ್​ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್​ಗಳ ಭರ್ಜರಿ ಪ್ರದರ್ಶನದಿಂದ ಕೊಹ್ಲಿ ಪಡೆ 82 ರನ್​ಗಳ ಜಯ ಸಾಧಿಸಿದೆ.

ನೆನ್ನೆಯ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್ ವೃತ್ತಿಜೀವನದ 22ನೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಐಪಿಎಲ್ ನಲ್ಲಿ ಅತಿ ಹೆಚ್ಚು ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ನೆನ್ನೆ ಪಂದ್ಯದ ಪ್ರಶಸ್ತಿ ಸೇರಿ ಎಬಿಡಿ ಇಲ್ಲಿಯವರೆಗೆ ಬರೋಬ್ಬರಿ 22 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ..

ಈ ಮೂಲಕ ಎಬಿಡಿ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಕಿಂಗ್ಸ್ ಇಲೆವೆನ್ ತಂಡದ ಕ್ರಿಸ್ ಗೆಲ್ 21 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಇಲ್ಲಿಯವರೆಗೂ ಅದೇ ದಾಖಲೆಯಾಗಿತ್ತು.

ಐಪಿಎಲ್ ಇತಿಹಾಸದಲ್ಲಿ ಮೋಸ್ಟ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳು: –
ಎಬಿ ಡಿವಿಲಿಯರ್ಸ್: 22
ಕ್ರಿಸ್ ಗೇಲ್: 21
ರೋಹಿತ್ ಶರ್ಮಾ: 18
ಡೇವಿಡ್ ವಾರ್ನರ್: 17
ಎಂ.ಎಸ್.ಧೋನಿ: 17
ಶೇನ್ ವ್ಯಾಟ್ಸನ್: 16

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top