ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್ಗಳ ಭರ್ಜರಿ ಪ್ರದರ್ಶನದಿಂದ ಕೊಹ್ಲಿ ಪಡೆ 82 ರನ್ಗಳ ಜಯ ಸಾಧಿಸಿದೆ.
2 balls went out of ground 🔥🔥#ABDevilliers#KKRvRCB#ABDevilliers#IPL2020 pic.twitter.com/wdAikbkarZ
— ADV. VINEET CHAUDHARY🇮🇳 (@VINEETC68730862) October 12, 2020
ಎಬಿಡಿಯ ನಿನ್ನೆಯ ಆಟ ಎಲ್ಲರ ಗಮನ ಸೆಳೆದಿದೆ. ಕೇವಲ 33 ಎಸೆತಗಳಲ್ಲಿ ಅವರು 73 ರನ್ ಬಾರಿಸಿದ್ದಾರೆ. ಎಬಿಡಿ ಸಿಡಿಸಿದ ಆರು ಸಿಕ್ಸ್ಗಳ ಪೈಕಿ ಮೂರು ಸಿಕ್ಸ್ಗಳು ಮೈದಾನದಿಂದ ಹೊರ ಹೋಗಿವೆ. ಒಂದು ಬಾಲ್ ನೇರವಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿಗೆ ತಾಗಿದೆ. ಈ ವೇಳೆ ಕಾರಿನ ಗಾಜು ಪುಡಿಪುಡಿಯಾಗಿದೆ ಎನ್ನಲಾಗುತ್ತಿದೆ. ಮತ್ತೆರಡು ಬಾಲ್ ಸ್ಟೇಡಿಯಂನಿಂದ ಹೊರಗಷ್ಟೇ ಬಿದ್ದಿದೆ. ಇನ್ನು ಒಂದು ಬಾಲು ಶಾರ್ಜಾದ ಹೊರಗಿದ್ದ ಬಾಲಕನಿಗೆ ಸಿಕ್ಕಿದೆ.
This child got the ball that ABD hit for a six out of the stadium..💥#ABDevilliers #KKRvsRCB pic.twitter.com/CCJQD9edi4
— ABHIJITH_VIRATIAN (❤️✰ʀᴄʙ✰❤️) (@iamabhijith18) October 12, 2020
ಇನಿಂಗ್ಸ್ನ 16 ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಎಬಿಡಿ ಸಿಕ್ಸರ್ ಸಿಡಿಸುತ್ತಿದ್ದಂತೆ ಚೆಂಡು ಸ್ಟೇಡಿಯಂ ಹೊರಗೆ ಸಂಚರಿಸುವ ಕಾರಿಗೆ ಬಡಿದ ಪರಿಣಾಮ ಇದರಿಂದಾಗಿ ಕೆಲಕಾಲ ಶಾರ್ಜಾದಲ್ಲಿ ಸಂಚಾರಕ್ಕೆ ಅಡೆತಡೆಯಾಗಿದೆ.
Here is the second six of AB de Villiers landing on the Sharjah road. Previous one hit two cars 😀 #ipl2020 #KKRvRCB pic.twitter.com/pBWSJTnj08
— Paul Watson 🇿🇦🌍🇮🇪🇿🇼💕🏏 (@watsonmpaul) October 12, 2020
2 balls went out of ground 🔥🔥#ABDevilliers#KKRvRCB#ABDevilliers#IPL2020 pic.twitter.com/wdAikbkarZ
— ADV. VINEET CHAUDHARY🇮🇳 (@VINEETC68730862) October 12, 2020
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
