fbpx
ಸಮಾಚಾರ

ನಟಿ ಪ್ರಣೀತಾ ಹೆಸರಲ್ಲಿ ಲಕ್ಷ ಲಕ್ಷ ವಂಚನೆ: ಇಬ್ಬರ ವಿರುದ್ಧ ಕೇಸ್ ದಾಖಲು

ನಟಿ ಪ್ರಣೀತಾರನ್ನು ಬ್ರ್ಯಾಂಡ್‌ ಅಂಬಾಸಿಡರ್‌ ಮಾಡಿಕೊಡುವುದಾಗಿ ಹೇಳಿ ಇಬ್ಬರು ಆರೋಪಿಗಳು ಡೆವಲಪರ್‌ ಒಬ್ಬರಿಂದ 13.50 ಲಕ್ಷ ರೂ. ಪಡೆದು ವಂಚಿಸಿದ್ದಾರೆ. ಈ ಸಂಬಂಧ ಆಂಧ್ರ ಪ್ರದೇಶದ ಎಸ್‌.ವಿ. ಗ್ರೂಪ್‌ ಆಫ್‌ ಬಿಲ್ಡರ್ಸ್‌ ಮತ್ತು ಡೆವಲಪರ್ಸ್‌ನ ಮ್ಯಾನೇಜರ್‌ ಕೆ.ಅಮರನಾಥರೆಡ್ಡಿ ಎಂಬುವರು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ನಟಿ ಹೆಸರಿನಲ್ಲಿ 13.5 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಮಹಮ್ಮದ್ ಜೂನಾಯತ್ ಹಾಗೂ ವರ್ಷಾ ಎಂಬುವವರ ವಿರುದ್ಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಎಸ್​ವಿ ಗ್ರೂಪ್ ಅಂಡ್ ಡೆವಲಪರ್ಸ್​ ಹೆಸರಿನ ಖಾಸಗಿ ಕಂಪನಿಗೆ ನಟಿ ಪ್ರಣೀಯಾ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡುತ್ತೇವೆಂದು ಹೇಳಿ ಮಹಮ್ಮದ್ ಜೂನಾಯತ್ ಮತ್ತು ವರ್ಷ ಎನ್ನುವವರು ಯಾಮಾರಿಸಿದ್ದಾರೆ. ಕಂಪನಿಯ ಮ್ಯಾನೇಜರ್​ರನ್ನು ಖಾಸಗಿ ಹೋಟೆಲ್ ಕರೆಸಿಕೊಂಡು ನಟಿಯನ್ನು ಬ್ರಾಂಡ್ ಅಂಬಾಸಿಡರ್ ಮಾಡೋದಾಗಿ ಹೇಳಿ ನಂಬಿಸಿ, ಅವರಿಂದ 13.5 ಲಕ್ಷ ನಗದು ಪಡೆದುಕೊಂಡಿದ್ದಾರೆ..

ನೀವು ಹಣ ನೀಡಿದರೆ ಪ್ರಣೀತಾ ಇನ್ನೊಂದು ಗಂಟೆಯಲ್ಲಿ ಬಂದು ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ನೀವು 13.5 ಲಕ್ಷ ರೂ. ಪಾವತಿಸಿ ಎಂದು ಹೇಳಿದ್ದಾರೆ. ಆರೋಪಿಗಳ ಮಾತು ನಂಬಿ ಮ್ಯಾನೇಜರ್ 13.5 ಲಕ್ಷ ರೂ. ನೀಡಿದ್ದಾರೆ. ಹಣ ಪಡೆಯುತ್ತಿದ್ದಂತೆ ರೂಮ್ ಒಳಗೆ ಹೋಗಿ ಬರೋದಾಗಿ ಹೇಳಿ ಆರೋಪಿಗಳು ಪರಾರಿಯಾಗಿದ್ದಾರೆ.

ದೂರಿನ ವಿವರ:
‘ನಮ್ಮ ಕಂಪನಿಗೆ ಬ್ರ್ಯಾಂಡ್ ಅಂಬಾಸಿಡರ್ ಅಗತ್ಯವಿತ್ತು. ಸ್ನೇಹಿತ ಪ್ರಶಾಂತ್ ಎಂಬುವರ ಮೂಲಕ ಪರಿಚಯವಾಗಿದ್ದ ಆರೋಪಿ ಜುನಾಯತ್, ‘ನಟಿ ಪ್ರಣೀತಾ ಅವರನ್ನು ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಸುತ್ತೇನೆ. ಒಪ್ಪಂದ ಪತ್ರಕ್ಕೆ ಅವರಿಂದಲೇ ಸಹಿ ಮಾಡಿಸಿಕೊಡುತ್ತೇನೆ’ ಎಂದಿದ್ದ. ಇದೇ 10ರಂದು ಹೋಟೆಲೊಂದಕ್ಕೆ ಆರೋಪಿ ವರ್ಷಾ ಎಂಬಾಕೆಯನ್ನು ಕರೆತಂದಿದ್ದ ಜುನಾಯತ್, ಆಕೆ ಪ್ರಣೀತಾ ಅವರ ವ್ಯವಸ್ಥಾಪಕಿ ಎಂದು ಪರಿಚಯಿಸಿದ್ದ. ನಟಿಗೆ ಮುಂಗಡವಾಗಿ ಹಣ ಬೇಕೆಂದು ಹೇಳಿ ಇಬ್ಬರೂ ₹13.50 ಲಕ್ಷ ಪಡೆದಿದ್ದರು. ಅದಾದ ನಂತರ ಹೋಟೆಲ್‌ನ ಕೊಠಡಿಗೆ ಹೋಗಿ ಬರುವುದಾಗಿ ಹೇಳಿಹೋದ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದು ದೂರಿನಲ್ಲಿ ಅಮರನಾಥ್ ರೆಡ್ಡಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top